ಅಣ್ಣಿಗೇರಿ: ರೈತನಿಗೆ ಸಂಕಷ್ಟಗಳು ತಪ್ಪಿದ್ದಲ್ಲ ಬಿಡಿ. ಮೊನ್ನೆ ರಾತ್ರಿ ಸುರಿದ ಮಳೆ ಮತ್ತು ಅತಿಯಾದ ಗಾಳಿನೇ ಇದಕ್ಕೆ ಸಾಕ್ಷಿ. ನಿಜ, ಇದರಿಂದ ಹೆಸರಿನ ಬೆಳೆ ಸಂಪೂರ್ಣವಾಗಿ ಬಾಗಿಕೊಂಡು ಹಾಳಾಗಿದೆ.
ಗುರುವಾರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಸಾಯಂಕಾಲದಿಂದ ಪ್ರಾರಂಭವಾದ ಗುಡುಗು ಮಿಂಚು ಸಹಿತ ಮಳೆ ಮತ್ತು ಅತಿಯಾದ ಗಾಳಿಗೆ ರೈತರು ಬೆಳೆದ ಹೆಸರಿನ ಬೆಳೆ ಸಂಪೂರ್ಣವಾಗಿ ಬಾಗಿಕೊಂಡು ಹಾಳಾಗಿದೆ. ಎರಡು-ಮೂರು ವಾರಗಳ ನಂತರ ಹೆಸರು ಕೈಗೆ ಬರುತ್ತವೆ ಎನ್ನುವಷ್ಟರಲ್ಲಿ ಈ ರೀತಿ ಅವಾಂತರ ಸೃಷ್ಟಿಸಿದ.
ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ಮಾಡಿ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಳೆ ಪರಿಹಾರ ನೀಡಬೇಕು ಎಂದು ತಾಲೂಕಿನಾದ್ಯಂತ ರೈತಾಪಿ ವರ್ಗ ಒತ್ತಾಯ ಮಾಡುತ್ತಿದ್ದಾರೆ.
Kshetra Samachara
30/07/2022 09:31 am