ನವಲಗುಂದ: ಇಂದು ನವಲಗುಂದದಲ್ಲಿ ಬೀಸಿದ ಜೋರು ಗಾಳಿಗೆ ಪಟ್ಟಣದ ಬಸವೇಶ್ವರ ನಗರದಲ್ಲಿ ಬೃಹತ್ ಮರವೊಂದು ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದ ಮೇಲೆ ಉರುಳಿದೆ. ಪರಿಣಾಮ ಎರಡು ಕಂಬಗಳು ಸಂಪೂರ್ಣ ನೆಲ ಕಚ್ಚಿದೆ. ಇದರಿಂದಾಗಿ ಅಲ್ಲಿದ್ದ ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇಂದು ಪಟ್ಟಣದಲ್ಲಿ ಗಾಳಿ ಬೀಸಿದ ರಭಸಕ್ಕೆ ಬಸವೇಶ್ವರ ನಗರದ 18ನೇ ವಾರ್ಡ್ ನಲ್ಲಿದ್ದ ಮರ ಬಿದ್ದು ಎರಡು ಕಂಬಗಳು ನೆಲಕ್ಕುರುಳಿದೆ. ಈ ಸಂದರ್ಭ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಮನೆ ಎದುರು ನಿಲ್ಲಿಸಲಾಗಿದ್ದ ಟಾಟಾ ಏಸ್ ಹಾಗೂ ಸ್ಕೂಟಿಗೆ ಕೊಂಚ ಹಾನಿಯಾಗಿದೆ.
ಘಟನೆ ನಡೆಯುವ ಮುನ್ನ ಮಕ್ಕಳು ಇದೇ ಸ್ಥಳದಲ್ಲಿ ಆಟವಾಡುತ್ತಿದ್ದರು. ಗಾಳಿ ಬೀಸುತ್ತಿದ್ದಂತೆಯೇ ಮಕ್ಕಳನ್ನು ಪಾಲಕರು ಮನೆಯೊಳಕ್ಕೆ ಕರೆಯಿಸಿಕೊಂಡಿದ್ದರಿಂದ ದೊಡ್ಡ ಅವಘಡ ತಪ್ಪಿದೆ. ಸ್ಥಳಕ್ಕೆ ನವಲಗುಂದ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Kshetra Samachara
11/06/2022 05:55 pm