ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳ್ಯಾಳ ಗ್ರಾಮದಲ್ಲಿ ಮಂಗಗಳ ಪ್ರೇಮ: ಹುಚ್ಚು ಮಂಗನ ಹುಚ್ಚಾಟಕ್ಕೆ ನೆಟ್ಟಗಾದ ಜನರ ರೋಮ!

ಪಬ್ಲಿಕ್ ನೆಕ್ಸ್ಟ್ ವಿಶೇಷ- ಮಲ್ಲೇಶ್ ಸೂರಣಗಿ

ಹುಬ್ಬಳ್ಳಿ: ಅದು ಹುಬ್ಬಳ್ಳಿ ತಾಲೂಕಿನ ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ಮನುಷ್ಯನಂತೆಯೇ ಮಂಗಗಳು ಕೂಡ ಇಲ್ಲಿನ ಜನರ ಜೊತೆಗೆ ಹೊಂದಿಕೊಂಡು ಜೀವಿಸುತ್ತಿವೆ. ಈ ಜನರಿಗೆ ನೆರೆಹೊರೆಯವರಂತಿರುವ ಮಂಗಗಳು ಅಂದರೆ ಎಲ್ಲಿಲ್ಲದ ಪ್ರೇಮ. ಆದರೆ ಅದೊಂದು ಮಂಗ ಮಾತ್ರ ಆ ಊರಿನ ಜನರ ನಿದ್ದೆಗೆಡಿಸಿದ್ದು, ಈಗ ಜನರು ಭಯದಲ್ಲಿಯೇ ಓಡಾಡುವಂತಾಗಿದೆ. ಅಷ್ಟಕ್ಕೂ ಯಾವುದು ಆ ಗ್ರಾಮ...? ಅಲ್ಲಿ ನಡೆದಿದ್ದಾರೂ ಏನು ಅಂತೀರಾ? ಈ ಸ್ಟೋರಿ ನೋಡಿ.

ಹೀಗೆ ಕೈಯಲ್ಲಿರುವ ರೊಟ್ಟಿಗಳನ್ನು ಕಸಿದು ತಿನ್ನುತ್ತಿರುವ ಮಂಗಗಳು. ಅಕ್ಕರೆಯಿಂದ ಕರೆದು ಬಿಸ್ಕಿಟ್ ನೀಡುತ್ತಿರುವ ಗ್ರಾಮಸ್ಥರು. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮ. ಹೌದು.ಈ ಗ್ರಾಮದ ಜನರು ಮಂಗಗಳ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಮನೆಯ ಸದಸ್ಯರಂತೆ ಊಟ, ಉಪಚಾರ, ಯೋಗಕ್ಷೇಮ ವಿಚಾರಿಸುತ್ತಾರೆ. ಆದರೆ ಇಷ್ಟುದಿನ ಅನ್ಯೋನ್ಯವಾಗಿದ್ದ ಮಂಗಗಳ ಗುಂಪಿನಲ್ಲಿ ಒಂದು ಮಂಗ ಹುಚ್ಚು ಹಿಡಿದು ಗ್ರಾಮದ ಐದು ಜನರಿಗೆ ಗಂಭೀರವಾಗಿ ಗಾಯಗೊಳಿಸಿದೆ. ಪ್ರೀತಿಯಿಂದ ಮಂಗದ ಜೊತೆಗೆ ಒಡನಾಟ ಬೆಳಿಸಿಕೊಂಡಿದ್ದವರು ಏಕಾಏಕಿ ಭಯಗೊಂಡಿದ್ದಾರೆ. ಅಲ್ಲದೇ ತೀವ್ರವಾಗಿ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿದೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ತಾಲೂಕಿನ ತಹಶಿಲ್ದಾರರ ‌ಪ್ರಕಾಶ ನಾಶಿ, ಪಿಡಿಒ ಪಿ.ಆರ್.ವಾಲೀಕಾರ ಹಾಗೂ ಗ್ರಾಮ ಲೆಕ್ಕಾಧಿಕಾರಿ ಐ.ಎಸ್.ಬೋರಗಾವಿ ಅವರು ವನ್ಯಜೀವಿ ಸಂರಕ್ಷಕ ಅಡಿವೆಪ್ಪ ತಳವಾರ ಎಂಬುವವರನ್ನು ಕರೆಸಿ ಗ್ರಾಮದಲ್ಲಿ ಅಶಾಂತಿಯನ್ನು ಹುಟ್ಟು ಹಾಕಿದ್ದ ಮಂಗವನ್ನು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅರಣ್ಯಕ್ಕೆ ಸ್ಥಳಾಂತರ ಮಾಡಲಾಗಿದೆ. ತಕ್ಷಣವೇ ಎಚ್ಚೇತ್ತುಕೊಂಡ ತಹಶಿಲ್ದಾರರ ಶೀಘ್ರ ಕಾರ್ಯಾಚರಣೆ ಮೂಲಕ ಜನರ ಆತಂಕವನ್ನು ದೂರ ಮಾಡಿದ್ದಾರೆ. ತಹಶೀಲ್ದಾರರ ಹಾಗೂ ಅಧಿಕಾರಿಗಳ ಕಾರ್ಯಕ್ಕೆ ಜನರು ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಮಂಗಗಳೊಂದಿಗೆ ಒಡನಾಟ ಬೆಳೆಸಿಕೊಂಡಿದ್ದವರಲ್ಲಿ ಆತಂಕ ಮನೆ ಮಾಡಿದೆ‌. ಆದರೂ ಇಲ್ಲಿನ ಜನರಿಗೆ ಮಂಗಗಳ ಮೇಲಿನ ಪ್ರೀತಿ ಮಾತ್ರ ಕಿಂಚಿತ್ತೂ ಕಾಳಜಿ ಕಡಿಮೆಯಾಗಿಲ್ಲ. ತಮ್ಮ ದೈನಂದಿನ ಬದುಕಿನ ಜೊತೆಗೆ ವನ್ಯ ಜೀವಿಗಳ ಮೇಲಿನ ಪ್ರೇಮಕ್ಕೆ ಈ ಗ್ರಾಮ ಸಾಕ್ಷಿಯಾಗಿರುವುದು ನಿಜಕ್ಕೂ ವಿಶೇಷವಾಗಿದೆ.

Edited By : Manjunath H D
Kshetra Samachara

Kshetra Samachara

05/06/2022 01:23 pm

Cinque Terre

112.74 K

Cinque Terre

1

ಸಂಬಂಧಿತ ಸುದ್ದಿ