ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆ-ಗಾಳಿ ರಭಸಕ್ಕೆ 2 ಕಾರು, ಆಟೋ ಮೇಲೆ ಬಿದ್ದ ಬೃಹತ್ ಮರ.!

ಹುಬ್ಬಳ್ಳಿ: ಇಂದು ಏಕಾಏಕಿ ಸುರಿದ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ಒಂದು ಆಟೋ ಹಾಗೂ 2 ಕಾರುಗಳ ಮೇಲೆ ಬಿದ್ದ ಘಟನೆ ನಗರದ ದೇಸಾಯಿ ಕ್ರಾಸ್ ಪಿಂಟೊ ರೋಡ್‌ನಲ್ಲಿ ನಡೆದಿದ್ದು, ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೃಹತ್ ಮರವು ರಸ್ತೆಯ ಮೇಲೆ ಹೋಗುತ್ತಿದ್ದ ಕಾರು ಮತ್ತು ಆಟೋ ಮೇಲೆ ಉರುಳಿದೆ. ಪರಿಣಾಮ ಕಾರು ಮತ್ತು ಆಟೋ ಜಖಂಗೊಂಡಿದ್ದು, ಕೂದಲು ಎಳೆಯಲ್ಲಿ ಚಾಲಕರು ಪಾರಾಗಿ ಬಂದಿದ್ದಾರೆ. ಒಳಗೆ ಸಿಲುಕಿಕೊಂಡವರನ್ನು ಸ್ಥಳೀಯರು ಹೊರಗೆ ತೆಗೆದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/05/2022 09:13 pm

Cinque Terre

84.92 K

Cinque Terre

1

ಸಂಬಂಧಿತ ಸುದ್ದಿ