ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಹಿಳೆಯರ ಮೇಲೆ ದಾಳಿ ಮಾಡಿದ್ದು ಚಿರತೆಯಲ್ಲ

ಧಾರವಾಡ: ಮೊನ್ನೆಯಷ್ಟೇ ಧಾರವಾಡ ತಾಲೂಕಿನ ಕವಲಗೇರಿ ಹಾಗೂ ಗೋವನಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಹೇಳಲಾಗಿತ್ತು. ಆದರೆ, ವಾಸ್ತವವಾಗಿ ಅದು ಚಿರತೆಯಲ್ಲ. ಯಾವುದೋ ಕಾಡು ಪ್ರಾಣಿ ಎಂದು ಗುರುತಿಸಲಾಗಿದೆ. ಅದರ ಹೆಜ್ಜೆ ಗುರುತುಗಳ ಸಹ ಪತ್ತೆಯಾಗಿವೆ.

ಕಡಲೆ ಕೀಳಲೆಂದು ಹೊರಟಿದ್ದ ಮಹಿಳೆಯರ ಮೇಲೆ ನಸುಕಿನಜಾವ ಈ ಕಾಡು ಪ್ರಾಣಿ ದಾಳಿ ಮಾಡಿದೆ. ಕತ್ತಲಲ್ಲಿ ಅದು ಯಾವ ಪ್ರಾಣಿ ಎಂಬುದು ಆ ಮಹಿಳೆಯರಿಗೂ ಗೊತ್ತಾಗಿಲ್ಲ. ಹೀಗಾಗಿ ಅದು ಚಿರತೆ ಇರಬಹುದು ಎಂದು ಮಹಿಳೆಯರು ಊಹಿಸಿದ್ದರು. ಈ ದಾಳಿ ನಡೆದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಮಹಿಳೆಯರ ಮೇಲೆ ದಾಳಿ ಮಾಡಿದ ಪ್ರಾಣಿ ಯಾವುದು ಎಂಬುದನ್ನು ಪತ್ತೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡುವಲ್ಲಿ ಹರಸಾಹಸ ಪಟ್ಟರಾದರೂ ಕೊನೆಗೆ ಅದು ಚಿರತೆ ಅಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಆ ಏರಿಯಾದಲ್ಲಿ ನಾಯಿ ಜಾತಿಯ ಕತ್ತೆಕಿರುಬ, ತೋಳ ಅಥವಾ ನರಿ ದಾಳಿ ಮಾಡಿರಬಹುದು ಎಂಬುದು ಸ್ಪಷ್ಟಗೊಂಡಿದೆ. ಅಲ್ಲದೇ ನಾಯಿ ಜಾತಿಯ ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿವೆ.

ಸದ್ಯ ಕವಲಗೇರಿ ಹಾಗೂ ಗೋವನಕೊಪ್ಪದ ಸುತ್ತಮುತ್ತಲ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೈಟ್‌ ರೌಂಡ್ಸ್‌ ಮಾಡುತ್ತಿದ್ದು, ಆ ಕಾಡು ಪ್ರಾಣಿಯ ಪತ್ತೆಗಾಗಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ವಹಿಸಲಾಗಿದೆ. ಆ ಭಾಗದ ಜನ ಚಿರತೆ ಇದೆ ಎಂದು ಗಾಬರಿಯಾಗುವುದು ಬೇಡ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Nagesh Gaonkar
Kshetra Samachara

Kshetra Samachara

04/02/2022 03:31 pm

Cinque Terre

43.92 K

Cinque Terre

1

ಸಂಬಂಧಿತ ಸುದ್ದಿ