ಧಾರವಾಡ: ಏನ್ರೀ ಪಾ ಮಾರಾಯ್ರ ಇದು.. ಅಕ್ಟೋಬರ್ ಮುಗದು ನವೆಂಬರ್ ತಿಂಗಳಾ ಬರಾಕತ್ತೈತಿ. ಮೈ ಕೊರಿವಂಗ ತಂಡಿ ಬಿಡಬೇಕ ಈಗ. ಆದ್ರ, ಈ ಮಳಿಗಾಲನ ಇನ್ನೂ ಮುಗಿವಲ್ದ ನೋಡ್ರಿ..
ಅಂತೂ ಇಂತೂ ಮಳಿ ಹೊರಪ ಕೊಟ್ತು ಅನ್ನೋದ್ರಾಗ ಇವತ್ತ ಮತ್ತ ಬಂದು ಹಚ್ಚಿ ಕಟದೈತಿ ನೋಡ್ರಿ.. ಶನಿವಾರ ಮುಂಜಾಲಿಂದ ಬಿಸಲು ಇತ್ತು. ಇವತ್ತೇನ ಮಳಿ ಬರಲಿಕ್ಕಿಲ್ಲ ಅನ್ನೋದ್ರಳಗ ಮಧ್ಯಾಹ್ನ ಏಕಾಏಕಿ ಬಂದ ಮಳಿ ಒಂದ ತಾಸಿಗೂ ಹೆಚ್ಚು ಕಾಲ ಸುರದೈತಿ ನೋಡ್ರಿ.
ಈ ಮಳಿಯಿಂದ ಧಾರವಾಡದಗಿನ ಟೋಲನಾಕಾ ರಸ್ತೆ ಅಂತೂ ಪೂರ್ತಿ ತುಂಬಿತ್ತ ನೋಡ್ರಿ. ಮಳಿ ನೀರು ಮ್ಯಾನ್ ಹೋಲ್ ನ್ಯಾಗಿಂದ ಹರದು ಬರಾಕತ್ತಿತ್ತ. ರಸ್ತೆದಾಗ ಈ ರೀತಿ ನೀರು ನಿಂತಿದ್ರಿಂದ ನಮ್ಮ ವಾಹನ ಸವಾರರು ಪರದಾಡುವಂಗ ಆತ ನೋಡ್ರಿ.
Kshetra Samachara
24/10/2020 07:17 pm