ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಹುಬ್ಬಳ್ಳಿ ಹುಡುಗಿ ಹವಾ

ಪಬ್ಲಿಕ್ ನೆಕ್ಸ್ಟ್- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಈ ಯುವತಿ ಮಾಡಲಿಂಗ್ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕೆಂದು ಪಣತೊಟ್ಟವಳು. ಸುಮಾರು 20 ವರ್ಷ ಶ್ರಮ ಪಟ್ಟು ದೇಶದಲ್ಲಿ ನಡೆದ ಹಲವಾರು ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಹೀಗೆ ಕ್ಯಾಟ್ ವಾಕ್ ಮಾಡುತ್ತಿರುವ ಈ ಯುವತಿಯ ಹೆಸರು ಪ್ರಿಯಾಂಕಾ ಕೊಲವೇಕರ. ಹುಬ್ಬಳ್ಳಿಯ ಮೊರಾರ್ಜಿ ನಗರದ ನಿವಾಸಿ ಗಣಪತಿ ಮಂಗಳಾ ದಂಪತಿಯ ಪುತ್ರಿ. 2022, ಮೇ 29ರಂದು ರಾಜಧಾನಿ ದೆಹಲಿಯಲ್ಲಿ ಸಂದೀಪ ಗೋಸ್ವಾಮಿ, ಸೋನಿಯಾ ಖಟಾನಾ ಆಯೋಜಿಸಿದ್ದ ಇಂಡಿಯಾಸ್ ಟಾಪ್ ಮಾಡೆಲ್ಸ್ ಸ್ಪರ್ಧೆಯಲ್ಲಿ ವಿನ್ನರ್ ಆಗಿ ಹುಬ್ಬಳ್ಳಿಗೆ ಕೀರ್ತಿ ತಂದಿದ್ದಾಳೆ.

ಪ್ರಿಯಾಂಕಾ ಕರ್ನಾಟಕವನ್ನು ಪ್ರತಿನಿಧಿಸಿದ್ದರಲ್ಲದೇ ಪ್ಲೈ ಡೈನ್ ಗೋವಾದ ವಿನಯಕುಮಾರ ಪ್ರಾಯೋಜಕತ್ವ ವಹಿಸಿದ್ದರು. ಈ ಸ್ಪರ್ಧೆಯ ನಿರ್ಣಾಯಕರಾಗಿ ಪ್ರಿನ್ಸ್ ನರುಲಾ ಸೇರಿದಂತೆ ದೇಶದ ಪ್ರತಿಷ್ಠಿತ ಸೆಲಿಬ್ರಿಟಿಗಳು ಪಾಲ್ಗೊಂಡಿದ್ದರು. ವಿನ್ನರ್ ಆಗಿ ಪ್ರಶಸ್ತಿ ಪಡೆದ ಪ್ರಿಯಾಂಕಾ ಫುಲ್ ಖುಷ್ ಆಗಿದ್ದಾರೆ.

ಗೋವಾದಲ್ಲಿ ನಡೆದ 2019ರ ರಾಯಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದರಲ್ಲದೇ ಈಗ ರಾಷ್ಟ್ರಮಟ್ಟದಲ್ಲಿ ಮತ್ತೆ ಮಿಂಚಿದ್ದಾರೆ. 2016ರಲ್ಲಿ ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್, ಮಿಸ್ ಭಾರತ ಅರ್ಥ್ 2018, ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್, ಎಲೈಟ್ ಮಿಸ್ ಇಂಡಿಯಾ ಅಡ್ವೆಂಚರ್ 2015 ಅವಾರ್ಡಗಳನ್ನೂ ಪಡೆದಿದ್ದಾರೆ.

ಒಟ್ಟಿನಲ್ಲಿ ದೇಶದಲ್ಲಿ ನಮ್ಮ ಹುಬ್ಬಳ್ಳಿ ಪ್ರತಿಭೆಗಳು ಮಿಂಚುತ್ತಿರುವುದು ವಾಣಿಜ್ಯ ನಗರಿಯ ಜನರಿಗೆ ಹೆಮ್ಮೆಯ ಸಂಗತಿ.

Edited By : Manjunath H D
Kshetra Samachara

Kshetra Samachara

01/06/2022 02:14 pm

Cinque Terre

22.3 K

Cinque Terre

1