ಹುಬ್ಬಳ್ಳಿ: ನಾಳೆ ದಿನದಂದು ರಂಜಾನ್ ಹಬ್ಬ. ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ. ಈ ಹಬ್ಬಕೆ ಕುಟುಂಬದ ಎಲ್ಲರೂ ಹೊಸ ಬಟ್ಟೆಗಳನ್ನ ಹಾಕಿಕೊಳ್ಳಬೇಕು ಎನ್ನುವ ಪದ್ಧತಿ ಮೊದಲಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ.
ಮುಸ್ಲಿಂ ಬಾಂಧವರು ಬಟ್ಟೆ, ಶೂ, ಪರ್ಫ್ಯೂಮ್, ಮನೆ ಅಲಂಕಾರಿ ವಸ್ತುಗಳು, ಆಭರಣಗಳನ್ನು ಖರೀದಿಸಲು ಜನ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.
ಕಳೆದ ಎರಡು ವರ್ಷಗಳಿಂದ ರಂಜಾನ್ ಮತ್ತು ಇತರೆ ಪ್ರಮುಖ ಹಬ್ಬಗಳನ್ನು ಕೊರೊನಾ, ಲಾಕ್‌ಡೌನ್‌ನಿಂದ ಆಚರಣೆ ಇಲ್ಲದೆ ಕಂಗಾಲಾಗಿದ್ದ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ. ವ್ಯಾಪಾರ ವಹಿವಾಟಿನಿಂದ ನಗರದ ಪ್ರಮುಖ ವ್ಯಾಪಾರ ಕೇಂದ್ರಳಾದ, ನ್ಯಾಷನಲ್ ಮಾರ್ಕೆಟ್, ಮಾಲ್‌ಗಳು, ದುರ್ಗದಬೈಲ್, ಜನತಾ ಬಜಾರ್, ಷಾ ಬಜಾರ್ ಗಳಲ್ಲಿ ಜನರು ಭರ್ಜರಿಯಾಗಿ ಖರೀದಿ ಮಾಡುತ್ತಿದ್ದಾರೆ.
Kshetra Samachara
02/05/2022 12:46 pm