ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿ.ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವೃದ್ಧನ ವಿನೂತನ ಕಾರ್ಯ: ಆಲ್ ಇಂಡಿಯಾ ರೌಂಡ್ ಹೊಡೆದ ರೈಡರ್...!

ಹುಬ್ಬಳ್ಳಿ: ನೂರು ಕಿಲೋ ಮೀಟರ್ ಬೈಕ್ ರೈಡ್ ಮಾಡಿದರೇ ಸುಸ್ತಾಗುತ್ತದೆ. ಆದರೆ ಇಲ್ಲೊಬ್ಬ ವೃದ್ಧ ರೈಡರ್ ತನ್ನ 65ನೇ ವಯಸ್ಸಿನಲ್ಲಿಯೇ ಆಲ್ ಇಂಡಿಯಾ ಟೂರ್ ಮಾಡುವ ಮೂಲಕ ಯುವಕರನ್ನು ಹುಬ್ಬೇರುವಂತೆ ಮಾಡಿದ್ದಾರೆ.

ಹುಬ್ಬಳ್ಳಿಯ ಶಂಕರ ದೊಡ್ಡಮನಿ ಎಂಬುವವರೇ ತಮ್ಮ 65ನೇ ವಯಸ್ಸಿನಲ್ಲಿ 14 ದಿನಕ್ಕೆ 6500 ಕಿಲೋಮೀಟರ್ ಬೈಕ್ ರೈಡ್ ಮಾಡುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ಡಿಸೆಂಬರ್‌ 20ರಂದು ರೈಡ್ ಪ್ರಾರಂಭ ಮಾಡಲಾಗಿತ್ತು. ಇನ್ನೂ ಈ ಅಭಿಯಾನಕ್ಕೆ ಚೆನ್ನಮ್ಮ ಸರ್ಕಲ್ ನಲ್ಲಿ ಎಸಿಪಿ ವಿನೋದ್ ಮುಕ್ತೆದಾರ ಚಾಲನೆ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಚತುಷ್ಕೋನ್ ರಸ್ತೆಯ ಪರ್ಯಟನೆಯ ಉದ್ದೇಶದಿಂದ ಬೈಕ್ ರೈಡ್ ಹಮ್ಮಿಕೊಳ್ಳಲಾಗಿತ್ತು ಎನ್ನುತ್ತಾರೆ ಶಂಕರ್ ದೊಡ್ಡಮನಿ.

ಇನ್ನೂ ಶಂಕರ ದೊಡ್ಡಮನಿ, ಹುಬ್ಬಳ್ಳಿಯಿಂದ ರಾಯಲ್ ಎನಫೀಲ್ಡ್ ಬೈಕ್ ಮೂಲಕ ಮಹಾರಾಷ್ಟ್ರ ಗುಜರಾತ್ ರಾಜಸ್ಥಾನ, ದೆಹಲಿ,‌ ಯುಪಿ, ಬಿಹಾರ, ಝಾರ್ಕಂಡ್, ವೆಸ್ಟ ಬೆಂಗಾಲ, ಕೋಲ್ಕತಾ, ‌ಓಡಿಸ್ಸಾ, ಆಂಧ್ರ ಪ್ರದೇಶ, ತಮಿಳುನಾಡು ಹೀಗೆ ದೇಶಾದ್ಯಂತ 14 ದಿನಗಳಲ್ಲಿ 6500 ಕಿಲೋಮೀಟರ್ ಕ್ರಮಿಸಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇವರ ಈ ಕಾರ್ಯಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಈ ಇಳಿವಯಸ್ಸಿನಲ್ಲೂ ಇಂತಹ ಸಾಹಸಕ್ಕೆ ಕೈ ಹಾಕಿರುವ ಇವರ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದ್ದು,‌ ಹುಬ್ಬಳ್ಳಿಯ ಜನರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

Edited By : Shivu K
Kshetra Samachara

Kshetra Samachara

03/01/2022 05:04 pm

Cinque Terre

76.49 K

Cinque Terre

11

ಸಂಬಂಧಿತ ಸುದ್ದಿ