ಹುಬ್ಬಳ್ಳಿ: ಆತ ಸಣ್ಣಪುಟ್ಟ ಸಮಾಜ ಸೇವೆ ಮಾಡಿಕೊಂಡಿದ್ದ ಯುವಕ. ಆದರೆ ಆತನನ್ನು ಟಾರ್ಗೆಟ್ ಮಾಡಿಕೊಂಡು ಸುಳ್ಳು ಪ್ರಕರಣ ದಾಖಲಿಸಿ ಆತನ ಭವಿಷ್ಯವನ್ನು ಹಾಳು ಮಾಡಲು ರಾಜಕೀಯವಾಗಿ ಸಂಚು ರೂಪಿಸಿದ್ದರು. ಆದರೆ ಆತನ ತಪ್ಪಿಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿ ಪ್ರಕರಣ ಖುಲಾಸೆ ಮಾಡಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಹೌದು..ಕುಂದಗೋಳ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇರಿಸಿರುವ ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮತ್ತು ಎಫ್ ಎಸ್ ಟಿ ಅಧಿಕಾರಿಗಳ ತಂಡ ರಾತ್ರಿ 9.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಹುಬ್ಬಳ್ಳಿ ನಗರದ ವಿವಿಧ ಪ್ರತಿಷ್ಠಿತ ಹೋಟೆಲ್ ಗಳ ಮೇಲೆ ದಾಳಿ ನಡೆಸಿತ್ತು.
ರಾತ್ರಿ 10 ಕ್ಕೆ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ವೊಂದರ ಕೊಠಡಿಯಲ್ಲಿ ಇರಿಸಲಾಗಿದ್ದ, ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಅವರ 11 ಭಾವಚಿತ್ರಗಳು, ಬಂಗಾರದ ಬಣ್ಣ ಲೇಪಿಸಿರುವ 50 ಅರಿಷಿಣ, ಕುಂಕುಮದ ಬಟ್ಟಲುಗಳು, 7 ಮತದಾರರ ಪಟ್ಟಿಗಳು, ಕೇಸರಿ, ಬಿಳಿ, ಹಸಿರು ವರ್ಣದ ಟೊಪ್ಪಿಗೆ ವಶಪಡಿಸಿಕೊಳ್ಳಲಾಗಿತ್ತು. ಆದರೆ ಇದರಲ್ಲಿ ಶಿವಕುಮಾರ್ ಗೋಕಾವಿ ಎಂಬುವಂತ ಯುವಕನನ್ನು ಸಿಕ್ಕಿ ಹಾಕಿಸಲಾಗಿತ್ತು. ಆದರೆ ನ್ಯಾಯಾಲಯ ತೀವ್ರ ವಿಚಾರಣೆ ಬಳಿಕೆ ಪ್ರಕರಣ ಖುಲಾಸೆ ಮಾಡಿದೆ.
ಇನ್ನೂ ಶಿವಕುಮಾರ್ ಗೋಕಾವಿ ಎಂಬ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ ಸೂಕ್ತ ಸಾಕ್ಷಾದಾರ ಲಭ್ಯವಾಗಿದೇ ಇರುವ ಹಿನ್ನೆಲೆಯಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಕುಮಾರ್ ಗೋಕಾವಿಯನ್ನು ನಿರ್ದೋಷಿ ಎಂದು ಆದೇಶ ಹೊರಡಿಸಿದ್ದು, ಯುವಕನಿಗೆ ಪುನರುಜ್ಜೀವನ ದೊರೆತಂತಾಗಿದೆ. ಈ ಬಗ್ಗೆ ಶಿವಕುಮಾರ್ ಏನ ಹೇಳ್ತಾರೆ ಕೇಳಿ.
ಒಟ್ಟಿನಲ್ಲಿ ಕೋರ್ಟ್ ಆದೇಶದಿಂದ ಯುವಕನಿಗೆ ನ್ಯಾಯ ಸಿಕ್ಕಿದ್ದು, ಸಾಮಾಜಿಕ ಕಾರ್ಯ ಮಾಡುತ್ತಿದ್ದ ಯುವಕ ಈಗ ನಿಟ್ಟುಸಿರು ಬಿಡುವಂತಾಗಿದೆ. ರಾಜಕೀಯ ವೈಷಮ್ಯಗಳ ನಡುವೆ ಅದೆಷ್ಟೋ ಯುವಕರ ಭವಿಷ್ಯ ಹಾಳಾಗುತ್ತಿದ್ದು, ಇಂತಹ ಅವ್ಯವಸ್ಥೆಗೆ ಬ್ರೇಕ್ ಬಿಳಬೇಕಿದೆ.
Kshetra Samachara
01/08/2022 10:06 pm