ನವಲಗುಂದ : ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನ್ಯಾಯವಾದಿಗಳಿಂದ ಜನನ ಮತ್ತು ಮರಣ ನೊಂದಣಿಗೆ ಸಂಭಂಧಿಸಿದ ವಿಷಯಗಳನ್ನು ಉಪವಿಭಾಗಾಧಿಕಾರಿಗಳಿಗೆ ವರ್ಗಾಯಿಸಿರುವ ಸರ್ಕಾರದ ಅಧಿಸೂಚನೆಯನ್ನು ವಿರೋಧಿಸಿ, ಮನವಿ ಸಲ್ಲಿಸಲಾಯಿತು.
ಗ್ರೇಡ್ 2 ತಹಶೀಲ್ದಾರ್ ಎಮ್. ಜೆ. ಹೊಕ್ರಾಣಿಯವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ, ಹಾಗೂ ಸಂಸದೀಯ ಕಾನೂನು ಮಂತ್ರಿಗಳಿಗೆ ನ್ಯಾಯವಾದಿಗಳು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ವ್ಹಿ. ಟಿ. ಕುಲಕರ್ಣಿ, ವ್ಹಿ. ಪಿ. ಪಾಟೀಲ, ವಾಯ್. ಬಿ. ಕುರಹಟ್ಟಿ, ಎಸ್. ಎನ್. ಡಂಬಳ, ಆರ್. ಎಮ್. ರಮಜೇನಿ, ಪ್ರಕಾಶ ಅಂಗಡಿ ಹಾಗೂ ಅನೇಕ ವಕೀಲರು ಉಪಸ್ಥಿತರಿದ್ದರು.
Kshetra Samachara
27/07/2022 08:29 pm