ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರ್ಗಾವಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್: ಕೃಷಿ ವಿವಿ ಕುಲಪತಿ ಡಾ.ಚೆಟ್ಟಿಗೆ ಮುಖಭಂಗ

ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಪದಾಧಿಕಾರಿಗಳನ್ನು ವರ್ಗಾವಣೆ ಮಾಡಿದ ಕುಲಪತಿಗಳ ಆದೇಶಕ್ಕೆ ಧಾರವಾಡ ಹೈಕೋರ್ಟ್ ನಿನ್ನೆ ತಡೆಯಾಜ್ಞೆ ನೀಡಿದೆ.

ಈ ತಡೆಯಾಜ್ಞೆಯಿಂದ ಕುಲಪತಿ ಡಾ.ಮಹಾದೇವ ಚೆಟ್ಟಿ ಅವರಿಗೆ ಭಾರೀ ಮುಖಭಂಗ ಆದಂತಾಗಿದೆ. ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಸುನೀಲ್ ಕರೀಕಟ್ಟಿ, ಉಪಾಧ್ಯಕ್ಷ ಡಾ. ಆರ್.ಎಚ್. ಪಾಟೀಲ, ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ.ರಾಮನಗೌಡ ಪಾಟೀಲ, ಪ್ರೊ.ಮಂಜುಳಾ ಎನ್. ಮತ್ತು ನಾಗಪ್ಪ ಗೋವನಕೊಪ್ಪ ಅವರನ್ನು ಕುಲಪತಿ ವಿವಿಧೆಡೆ ವರ್ಗಾವಣೆ ಮಾಡಿದ್ದರು.

ಕುಲಪತಿಗಳ ವರ್ಗಾವಣೆ ಕ್ರಮ ಪ್ರಶ್ನಿಸಿ ಶಿಕ್ಷಕರ ಕಲ್ಯಾಣ ಸಂಘದ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯವು ವರ್ಗಾವಣೆಯು ದುರುದ್ದೇಶಪೂರಿತವಾಗಿದ್ದು, ಅಂತಿಮ ಆದೇಶದವರೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಅರ್ಜಿದಾರರ ಪರ ಗಂಗಾಧರ ಜೆ.ಎಂ. ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.ಈ ಹಿಂದೆ ವಿವಿಯಲ್ಲಿ ಅಧಿಕಾರಿಗಳ ನೇಮಕ, ಶಿಕ್ಷಕರ ಕಲ್ಯಾಣ ಸಂಘದ ಸದಸ್ಯರ ವಿರುದ್ಧ ಶಿಸ್ತು ಸಮಿತಿ ರಚನೆಯ ಪ್ರಕರಣಗಳಲ್ಲಿಯೂ ಡಾ.ಚೆಟ್ಟಿ ಅವರಿಗೆ ಹಿನ್ನಡೆ ಉಂಟಾಗಿತ್ತು. ಇದೀಗ ವರ್ಗಾವಣೆ ಪ್ರಕರಣದಲ್ಲಿಯೂ ಡಾ.ಚೆಟ್ಟಿ ಮುಖಭಂಗ ಅನುಭವಿಸಿದಂತಾಗಿದೆ.

ಬಡ್ತಿ, ಜೇಷ್ಠತಾ ಪಟ್ಟಿ, ಪಿಂಚಣಿ, ಇತರೆ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆ ಪರಿಗಣನೆ, ನಿವೃತ್ತಿ ವಯೋಮಿತಿ ಏರಿಕೆ, ಜ್ಯೋತಿ ಸಂಜೀವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಅಕ್ಟೋಬರ್‌ನಲ್ಲಿ ಶಿಕ್ಷಕರ ಕಲ್ಯಾಣ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಸಿದ್ದರು. ಆದರೆ, ಕುಲಪತಿ ಡಾ.ಮಹಾದೇವ ಚೆಟ್ಟಿ ಅವರು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ, ಶಿಕ್ಷಕರು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದು ಡಾ.ಮಹಾದೇವ ಚೆಟ್ಟಿ ಅವರನ್ನು ಕೆರಳುವಂತೆ ಮಾಡಿತ್ತು.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/04/2022 07:12 pm

Cinque Terre

50.31 K

Cinque Terre

0

ಸಂಬಂಧಿತ ಸುದ್ದಿ