ಈರಣ್ಣ ವಾಲಿಕಾರ
ಹುಬ್ಬಳ್ಳಿ: ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ಭಾರತದಲ್ಲಿ ಆಧ್ಯಾತ್ಮಿಕ ಸದೃಢತೆಗೆ ಸರಕಾರ ಚಿಂತನೆ ನಡೆಸಿಲ್ಲ. ಯಾವುದೇ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದು, ಸರ್ಕಾರಿ ಅಭಿಯೋಜಕರ ಕಾನೂನು ನೆರವು ಪಡೆಯುವುದಕ್ಕಾಗಿಯೇ ಕಾನೂನು ಹೋರಾಟ ನಡೆಸಿದ್ದಾರೆ.
ಹೌದು. ಹೀಗೆ ಕೈಯಲ್ಲಿ ಡಾಕ್ಯುಮೆಂಟ್ಸ್ ಹಿಡಿದುಕೊಂಡು ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಪ್ರಶ್ನೆ ಮಾಡುತ್ತಿರುವ ಈ ವ್ಯಕ್ತಿಯ ಹೆಸರು ಶಿವಕುಮಾರ ಹುನುಗುಂದ. ಇವರು ಹುಬ್ಬಳ್ಳಿಯ ಕುಂದಗೋಳ ಕ್ರಾಸ್ ನಿವಾಸಿ. ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಹೊಂದಿದವರು. ಹಾಗೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಭಾರತ ದೇಶ ಆಧ್ಯಾತ್ಮದಲ್ಲಿ ಹೆಚ್ಚಿನ ಒಲವು ಹೊಂದಿದ ದೇಶ. ಆದರೆ ಸರಕಾರಗಳಿಂದ ಯಾವುದೇ ಕಾರ್ಯಗಳು ಆಗಿಲ್ಲ ಎನ್ನುವುದು ಇವರ ವಾದವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದು, ಆರ್ಥಿಕವಾಗಿ ಅಷ್ಟೊಂದು ಸದೃಢರಾಗಿಲ್ಲ. ಹೀಗಾಗಿ ಕಾನೂನು ನೆರವು ಪಡೆಯುವುದಕ್ಕಾಗಿಯೇ ಕಾನೂನು ಹೋರಾಟ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಇವರ ವಾದವೆಂದರೆ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಯೋಗ ಪುಸ್ತಕ ವಿತರಣೆ ಮಾಡಬೇಕು. ಆಧ್ಯಾತ್ಮಿಕ ಪತ್ರಿಕೆ ಬಿಡುಗಡೆಯಾಗಬೇಕು. ಆಧ್ಯಾತ್ಮಿಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಆಧ್ಯಾತ್ಮಿಕ ದಿನಾಚರಣೆ, ಆಧ್ಯಾತ್ಮಿಕ ಆಪ್ತ ಸಮಾಲೋಚನೆ ಪ್ರಾಧಿಕಾರ ಮಾಹಿತಿ ನೀಡಬೇಕು. ನೊಂದವರಿಗೆ ಪರಿಹಾರ ನೀಡುವ ಕೆಲಸ ಆಗಬೇಕು. ಮಾಯಾ ಕವಚ ಎನ್ನುವ ವಾಹನ ದೊರೆಯಬೇಕು. ಮೂಲ ಭೂತ ಹಕ್ಕಿನಡಿ ಈ ವಿಷಯಗಳು ಬರಬೇಕು ಎಂದು ಜನರ ಪರವಾಗಿ ಕಾನೂನು ಮೊರೆ ಹೋಗಲು ಸಿದ್ದರಾಗಿದ್ದಾರೆ.
Kshetra Samachara
13/04/2022 03:34 pm