ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿಥಿಲ ಕಟ್ಟಡದ ಕಾರ್ಯಾಚರಣೆಗೆ ಪಾಲಿಕೆ ಸಜ್ಜು: ಬ್ರಾಡ್ ವೇ ಯಿಂದ ಹೊರ ನಡೆದ ಅಂಗಡಿಕಾರರು

ಹುಬ್ಬಳ್ಳಿ: ಅದು ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹಳೆಯ ಕಟ್ಟಡ. ಕಟ್ಟಡ ಮಾತ್ರ ಹಳೆಯದಾದರೂ ಅದು ಇರುವ ಸ್ಥಳ ಮಾತ್ರ ಆಯಕಟ್ಟಿನ ಪ್ರದೇಶ. ಆದರೆ ಹಳೆಯ ಕಟ್ಟಡ ಇನ್ನೂ ಮುಂದೆ ನೆನಪು ಮಾತ್ರ. ಹಾಗಿದ್ದರೇ ಆ ಕಟ್ಟಡ ಯಾವುದು..? ಅಲ್ಲಿ ಆಗುತ್ತಿರುವುದಾದರೂ ಏನು ಅಂತ ತೋರಸ್ತೀವಿ ನೋಡಿ...

ಹೌದು.. ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಶಿಥಿಲ ಕಟ್ಟಡದ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ತನ್ನ ಒಡೆತನದಲ್ಲಿರುವ ಹುಬ್ಬಳ್ಳಿಯ ದುರ್ಗದಬೈಲ್ ಬ್ರಾಡ್ ವೇಯು ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ತೆರವು ಮಾಡಲು ಮುಂದಾಗಿದೆ. ಆದರೆ ಈ ಹಿಂದೆ ಅಂಗಡಿಕಾರರಿಗೆ ಸುಮಾರು ಸಾರಿ ನೋಟಿಸ್ ಕೂಡ ನೀಡಿದ್ದ ಪಾಲಿಕೆ ತೆರವು ಮಾಡಲು ಹರಸಾಹಸ ಪಡುವಂತಾಗಿತ್ತು. ಅಲ್ಲದೆ ಅಂಗಡಿಕಾರರು ಕೋರ್ಟ್ ಮೆಟ್ಟಿಲನ್ನು ಹತ್ತಿದ್ದರೂ ಈಗ ಎಲ್ಲದಕ್ಕೂ ಫುಲ್ ಸ್ಟಾಪ್ ಹಾಕುವ ಮೂಲಕ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಂಗಡಿಗಳನ್ನು ತೆರವು ಕಾರ್ಯಾಚರಣೆ ನಡೆಸುತ್ತಿದೆ.

ಸುಮಾರು ವರ್ಷಗಳ ಹಳೆಯದಾದ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ಕಟ್ಟಡದ ಸಾಮರ್ಥ್ಯ ತೀರಾ ಹದಗೆಟ್ಟಿದ್ದು, ಯಾವಾಗ ಬೇಕಾದರೂ ಬಿದ್ದು ಹೋಗಬಹುದಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇನ್ನೂ ಇಲ್ಲಿನ ಅಂಗಡಿಕಾರರು ಮಾತ್ರ ಅಂಗಡಿಗಳನ್ನು ಖಾಲಿ‌ ಮಾಡುತ್ತೇವೆ. ಆದರೆ ನಮಗೆ ಹೊಸ ಕಟ್ಟಡದಲ್ಲಿ ಅಲಾರ್ಟಮೆಂಟ್ ಮಾಡಬೇಕು ಎನ್ನುತ್ತಾರೆ.

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎಚ್ಚೇತ್ತುಕೊಂಡು ಮುಂದೆ ಸಂಭವಿಸಬಹುದಾದ ಅಪಘಾತಕ್ಕೆ ಬ್ರೇಕ್ ಹಾಕಿದ್ದು, ಇನ್ನೂ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಶಿಥಿಲ ಕಟ್ಟಡದ ಕಾರ್ಯಾಚರಣೆ ನಡೆಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

02/02/2022 09:52 am

Cinque Terre

86.34 K

Cinque Terre

9

ಸಂಬಂಧಿತ ಸುದ್ದಿ