ಹುಬ್ಬಳ್ಳಿ: ಮಹಿಳೆಯರು, ಮಕ್ಕಳು ಹಾಗೂ ಯುವಜನರನ್ನು ಅಪಹರಿಸಿ ಮಾನವ ಕಳ್ಳಸಾಗಣೆ ಮಾಡುವ ಪ್ರಕರಣಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಹೊಸ ಹೆಜ್ಜೆ ಇಟ್ಟಿದೆ. ಹು-ಧಾ ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕ (ಆ್ಯಂಟಿ ಹೂಮನ್ ಟ್ರಾಫಿಕಿಂಗ್ ಯೂನಿಟ್) ಆರಂಭಿಸಲಾಗಿದೆ.
ಹೌದು.. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ನಿರ್ಭಯ ಯೋಜನೆಯಡಿ ಅವಳಿ ನಗರ ವ್ಯಾಪ್ತಿಯಲ್ಲಿ ವಿಶೇಷ ಘಟಕ ಆರಂಭಿಸಿದೆ. ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಅಶೋಕ ಚವ್ಹಾಣ ನೇತೃತ್ವದ ತಂಡ ರಚಿಸಲಾಗಿದೆ. ಮಹಿಳಾ ಪಿಎಸ್‌ಐ, ಮೂವರು ಪುರುಷ ಹಾಗೂ ಮಹಿಳಾ ಸಿಬ್ಬಂದಿ ತಂಡದಲ್ಲಿ ಇದ್ದಾರೆ. ಇದರ ಉಪಯೋಗಕ್ಕಾಗಿ ಪ್ರತ್ಯೇಕ ವಾಹನಗಳನ್ನು ನೀಡಲಾಗಿದೆ.
ಉಪನಗರ ಪೊಲೀಸ್ ಕಟ್ಟಡದ ಮೊದಲ ಮಹಡಿಯಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಹೊಸ ಕಚೇರಿ ಆರಂಭಿಸಲಾಗುತ್ತಿದೆ. ನಿರ್ಭಯಾ ನಿಧಿಯಲ್ಲಿ ಕಚೇರಿ ನವೀಕರಣ ಕಾರ್ಯ ಭರದಿಂದ ಸಾಗಿದೆ. ಒಂದೆರಡು ವಾರಗಳಲ್ಲಿ ಕಚೇರಿ ಉದ್ಘಾಟನೆಯಾಗಲಿದೆ. ಈ ಮೊದಲು ನವನಗರದ ಪೊಲೀಸ್ ಕಮಿಷನರೇಟ್ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಪ್ರತ್ಯೇಕ ತಂಡ ಇರಲಿಲ್ಲ. ಹೊಸ ತಂಡ ಕುರಿತು ವಿಶೇಷ ಮುತುವರ್ಜಿ ವಹಿಸುವ ಮೂಲಕ ಮಾನವ ಕಳ್ಳಸಾಗಣಿಗೆ ಅಂಕುಶ ಹಾಕಬೇಕಿದೆ.
ಮಕ್ಕಳು, ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಕಚೇರಿಯಲ್ಲಿ ಶಾಖೆ ದೊಡ್ಡ ದೊಡ್ಡ ನಗರಗಳಿಗೆ ಕರೆದುಕೊಂಡು ಹೋಗುತ್ತಾರೆ. ಬಡ ಹೆಣ್ಣು ಮಕ್ಕಳಿಗೆ ಹಣ, ಐಷಾರಾಮಿ ಬದುಕಿನ ಆಮಿಷ ತೋರಿಸಿ ಮಾರಾಟ ಮಾಡುತ್ತಾರೆ. ವೇಶ್ಯಾವಾಟಿಕೆಗೆ ತಳ್ಳುತ್ತಾರೆ. ಬಡ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಹಚ್ಚುತ್ತಾರೆ. ಕಾರ್ಮಿಕರಾಗಿ ದುಡಿಸಿಕೊಳ್ಳುತ್ತಾರೆ. ಇಂತಹ ಮಹಿಳೆಯರು, ಮಕ್ಕಳ ದುಷ್ಕರ್ಮಿಗಳ ಮೇಲೆ ಖಾಕಿ ಪಡೆ ಮೂವರು ಹದ್ದಿನ ಕಣ್ಣು ಇಡಲಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದರೆ 0836-2233514 ಅಥವಾ 112ಗೆ ಕರೆ ಮಾಡಬಹುದು. ಕರೆ ಮಾಡಲು ಸಾಧ್ಯವಿಲ್ಲ ಎನ್ನುವವರು 'ಹೆಲ್ತ್' ಎಂದು ಟೈಪ್ ಮಾಡಿ ಮೊ.ಸಂ. 94808 02031 ಸಂದೇಶ ರವಾನಿಸಿದರೆ ಸಹಾಯ ದೊರೆಯಲಿದೆ.
Kshetra Samachara
10/08/2021 03:47 pm