ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಹನ ಸವಾರರಿಗೆ ಯೋಜನೆಗಳ ಮಾಹಿತಿ ನೀಡಿದ ನಿವೃತ್ತ RTO ಅಧಿಕಾರಿ ನಾಲ್ವತ್ವಾಡಮಠ

ಹುಬ್ಬಳ್ಳಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಹಲವಾರು ಯೋಜನೆ ತಿದ್ದುಪಡಿ ಮಾಡಿದೆ. ಚಾಲನಾ ಪರವಾನಗಿಗೆ ಸಂಬಂಧಿಸಿದ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಇನ್ಮುಂದೆ ಪರದಾಡಬೇಕಾಗಿಲ್ಲ‌. ದಾಖಲೆಗಳನ್ನು ಹಿಡ್ಕೊಂಡು ಆರ್‌ಟಿಓ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಇದೀಗ ಆರ್ ಟಿಓ ಕಚೇರಿಗಳು ಸಂಪೂರ್ಣವಾಗಿ ಡಿಜಿಟಲೀಕರಣವಾಗುತ್ತಿದ್ದು, ಮನೆಯಿಂದಲೇ ಎಲ್ಲ ಸಾರಿಗೆ ಸೇವೆಯನ್ನು ಪಡೆಯಬಹುದು.

ಹೌದು,,, ಇನ್ಮೇಲೆ ಆರ್‌ಟಿಓ ಕಚೇರಿ ಸಂಪೂರ್ಣ ಪಾರದರ್ಶಕವಾಗಿ ಕಾಗದ ರಹಿತ ವ್ಯವಹಾರ ನೀಡಲಿವೆ.ಇದು ಧಾರವಾಡ ಪೂರ್ವದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ ಸಾರಿಗೆ ಇಲಾಖೆಯ ನೂತನ ಯೋಜನೆಗಳ ಕುರಿತು, ನಿವೃತ್ತ ಆಗುತ್ತಿರುವ ‌ಹಿನ್ನಲೆಯಲ್ಲಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ, ಅಕ್ರಮಗಳು, ಏಜೆಂಟ್ ರ ಕಾಟ ತಪ್ಪಲಿದೆ. ಆರ್ ಟಿ ಓ ಕಛೇರಿಗೆ ಅಲೆದಾಡುವ ಪರಿಸ್ಥಿತಿಯೂ ಇರೋದಿಲ್ಲ. ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಮುಂದಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

03/08/2021 04:55 pm

Cinque Terre

26.17 K

Cinque Terre

7

ಸಂಬಂಧಿತ ಸುದ್ದಿ