ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋರ್ಟ್‌ ಆದೇಶ ತಿದ್ದಿ ಆಸ್ತಿ ಅಳತೆಗೆ ಯತ್ನಿಸಿದ ಒಂಬತ್ತು ಮಂದಿ ವಿರುದ್ಧ ದೂರು ದಾಖಲು

ಹುಬ್ಬಳ್ಳಿ: ಕೋರ್ಟ್‌ ಆದೇಶವನ್ನು ತಿದ್ದಿ,ವ್ಯಕ್ತಿಯೊಬ್ಬರಿಗೆ ಸೇರಿದ ಆಸ್ತಿಯನ್ನು ಕಾನೂನು ಬಾಹಿರವಾಗಿ ಅಳತೆ ಮಾಡಲು ಮುಂದಾದ ಒಂಬತ್ತು ಮಂದಿಯ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.

ನಗರದ ಬೈರಿದೇವರಕೊಪ್ಪದ ಮಾರುತಿ ಕಾಲೊನಿಯ ಶಂಕ್ರವ್ವ ಮೊರಬದ ಅವರ ಜಾಗವನ್ನು ಕಾನೂನು ಬಾಹಿರವಾಗಿ ಅಳತೆ ಮಾಡಲು ಮುಂದಾದ ಒಂಬತ್ತು ಮಂದಿ ವಿರುದ್ಧ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ನಾಗರಾಜ ಇಂಗಳಳ್ಳಿ, ವೆಂಕಟೇಶ ಇಂಗಳಳ್ಳಿ, ಬಸವರಾಜ ಇಂಗಳಳ್ಳಿ, ಚಂದ್ರಮೋಹನ ಇಂಗಳಳ್ಳಿ, ನೀಲಪ್ಪ ಇಂಗಳಳ್ಳಿ, ಅಜ್ಜಪ್ಪ ಕಂಪ್ಲಿ, ಕುಮಾರ ಕಂಪ್ಲಿ, ಮಾಳ್ವದೆ ಹಾಗೂ ಮತ್ತೊಬ್ಬ ಆರೋಪಿಗಳು.

ಬೈರಿದೇವರಕೊಪ್ಪ ಗ್ರಾಮದ ವಾರ್ಡ್‌ ನಂ. 24ರ ಆರ್‌.ಎಸ್‌. ನಂ. 285 ಅನ್ನು ಕೋರ್ಟ್‌ ಆದೇಶಕ್ಕೆ ಸೇರಿಸಿ ತಿದ್ದುಪಡಿ ಮಾಡಿದ್ದಾರೆ. ಮನೆಗೆ ಬಂದು ಬೆದರಿಸಿ ಜಾಗ ಅಳತೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದೆ.

Edited By :
Kshetra Samachara

Kshetra Samachara

25/01/2021 10:39 am

Cinque Terre

60.66 K

Cinque Terre

3

ಸಂಬಂಧಿತ ಸುದ್ದಿ