ಧಾರವಾಡ: ಧಾರವಾಡದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಲೇಔಟ್ ಗಳ ತೆರವು ಕಾರ್ಯಾಚರಣೆ ಇಂದು ನಡೆದಿದ್ದು, ಅಕ್ರಮವಾಗಿ ಲೇಔಟ್ ಮಾಡಿರುವವರಿಗೆ ನಡುಕ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಪೊಲೀಸ್ ಬಂದೋಬಸ್ತ್ ಮಧ್ಯೆ ನಗರದ ಹೊಸಯಲ್ಲಾಪುರ ಹಾಗೂ ಗೋವನಕೊಪ್ಪ ರಸ್ತೆಯಲ್ಲಿರುವ ಅಕ್ರಮ ಲೇಔಟ್ ಗಳ ತೆರವು ಕಾರ್ಯಾಚರಣೆ ನಡೆಸಿದರು.
ಹುಡಾದಿಂದ ಈ ಕಾರ್ಯಾಚರಣೆ ನಡೆಯುತ್ತಿದ್ದು, ಸ್ವತಃ ನಾಗೇಶ ಕಲಬುರ್ಗಿ ಅವರೇ ಕೈಯಲ್ಲಿ ಕಬ್ಬಿಣದ ಹಾರೆ ಹಿಡಿದು ತೆರವು ಕಾರ್ಯಾಚರಣೆ ನಡೆಸಿದರು. ಈಗಾಗಲೇ ಎಲ್ಲೆಲ್ಲಿ ಅಕ್ರಮ ಲೇಔಟ್ ಗಳನ್ನು ಮಾಡಲಾಗಿದೆಯೋ ಅವುಗಳ ಸರ್ವೆ ನಡೆಸಿದ್ದು, ಅಕ್ರಮವಾಗಿ ನಿರ್ಮಾಣಗೊಂಡಿರುವ ಲೇಔಟ್ ಗಳನ್ನು ತೆರವುಗೊಳಿಸಲಾಗುವುದು ಎಂದು ಈ ಹಿಂದೆಯೇ ನಾಗೇಶ ಕಲಬುರ್ಗಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
20/01/2021 03:46 pm