ಹುಬ್ಬಳ್ಳಿ: ನಾವು ನಮ್ಮ ಪುಂಗಿ ಊದುತ್ತೇವೆ, ನಮ್ಮ ಪುಂಗಿ ಮುಂದ ನಿಮ್ಮ ಪುಂಗಿ ನಡಿಯೋದಿಲ್ಲ ಗಣೇಶ ಮಂಡಳಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸ್ ಅಧಿಕಾರಿ ಸಜ್ಜನರ ವಿಡಿಯೋ ವೈರಲ್ ಆಗಿದೆ.
ನಗರದ ಬೆಂಡಿಗೇರಿ ಪೊಲೀಸ ಠಾಣೆಯ ಇನ್ಸ್‌ಪೆಕ್ಟರ್ ಸಜ್ಜನರ ಅವರು ತಮ್ಮದೆ ಆದ ಶೈಲಿಯಲ್ಲಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಹಚ್ಚಲು ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆ ನೀಡಿರುವ ಇನ್ಸ್‌ಪೆಕ್ಟರ್ ಸಜ್ಜನರ ಅವರು, ಪರೋಕ್ಷವಾಗಿ ಪೊಲೀಸರ ಎದುರು ಯಾರೂ ಏನೂ ನಡೆಯೋದಿಲ್ಲ ಎಂದು ಹೇಳಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ.
Kshetra Samachara
08/09/2022 03:59 pm