ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ರಾಪ್ತ ಬಾಲಕಿಯಿಂದ ಸಾರ್ವಜನಿಕ ಶೌಚಾಲಯ ಸ್ವಚ್ಛತೆ: ನೋಟಿಸ್

ಧಾರವಾಡ: ಧಾರವಾಡದ ಸಿಬಿಟಿ ಹತ್ತಿರವಿರುವ ಸಾರ್ವಜನಿಕ ಶೌಚಾಲಯದಲ್ಲಿ ಭಾನುವಾರ ಅಪ್ರಾಪ್ತ ಬಾಲಕಿಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಬಾಲ ಕಾರ್ಮಿಕ ನಿಷೇಧ ಕಾಯ್ದೆಯಡಿ ಈ ಕೃತ್ಯವು ಅಪರಾಧವಾಗಿದ್ದು ಹಾಗೂ 1986 ರ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ ) ತಿದ್ದುಪಡಿ ಕಾಯ್ದೆ 2016 ಅನ್ವಯ 2 ವರ್ಷ ಜೈಲು ಹಾಗೂ 5 ಲಕ್ಷದವರೆಗೆ ದಂಡವಿರುತ್ತದೆ. ಈ ಕುರಿತು ಅ.6 ರಂದು ಬೆಳಿಗ್ಗೆ 11 ಘಂಟೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆವರಣದಲ್ಲಿ ಇರುವ ಸ್ತ್ರೀ ಶಕ್ತಿ ಭವನದಲ್ಲಿ ನಡೆಯುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಿಚಾರಣೆ ಹಾಜರಾಗಲು ಶೌಚಾಲಯ ನಿರ್ವಹಣೆ ಗುತ್ತಿಗೆದಾರರಿಗೆ ಸೂಚಿಸಿದೆ.

Edited By :
Kshetra Samachara

Kshetra Samachara

05/10/2020 06:46 pm

Cinque Terre

28.16 K

Cinque Terre

0

ಸಂಬಂಧಿತ ಸುದ್ದಿ