ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತ ವಿರೋಧಿ ಸರ್ಕಾರದ ಬೆಂಡ್ ಎತ್ತೋಣ: ಕೋನರೆಡ್ಡಿ

ನವಲಗುಂದ: ರೈತವಿರೋಧಿ ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಮ್ ಸಿ ಕಾಯ್ದೆ ವಿರುದ್ಧ ಹಾಗೂ ಪಹಣಿ ಪತ್ರದ ಹಾಗೂ ಬೆಳೆ ಸಮೀಕ್ಷೆ ಲೋಪ ದೋಷಗಳಿಗೆ ಆಡಳಿತ ಸರ್ಕಾರವೇ ನೇರ ಹೊಣೆ ಎಂದು ನವಲಗುಂದ ಮಾಜಿ ಶಾಸಕ ಎನ್‌.ಹೆಚ್. ಕೋನರಡ್ಡಿ ಆರೋಪಿಸಿದರು.

ನವಲಗುಂದ -ವಿಜಯಪುರ ರಾಷ್ಟೀಯ ಹೆದ್ದಾರಿ ತಡೆದು ಪ್ರತಿಭಟನೇ ಮೂಲಕ ತಹಸೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದವರು.

ಜನ ವಿರೋಧಿ ಕಾಯ್ದೆಗಳ್ನ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವದು ಪ್ರಜಾಪ್ರಭುತ್ತವದ ಕೆಗ್ಗೊಲೆಯಾಗಿದೆ. ಹಾಗೂ ಮಹಾದಾಯಿ ಕಳಸಾ-ಬಂಡೂರಿ ಕೆಲಸ ಏಕೆ ಪ್ರಾಭಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯಿದರು. ಶೀಘ್ರದಲ್ಲೆ ಬೆಳೆವಿಮೆ ಹಣ ಬಿಡುಗಡೆ ಮಾಡಿ ಇದೆ 28/9/20 ಕ್ಕೆ ಕರ್ನಾಟಕ ಬಂದ್ ಗೆ ನವಲಗುಂದ -ಅಣ್ಣಿಗೇರಿ ತಾಲೂಕುಗಳಿಂದ ಜೆಡಿಎಸ್ ವತಿಯಿಂದ ಸಂಪೂರ್ಣ ಬೆಂಬಲ ನೀಡುವದಾಗಿ ರೈತಾಪಿ ವರ್ಗ, ವ್ಯಾಪಾರಸ್ಥರು, ವರ್ತಕರ ಸಂಘ ಬೆಂಬಲ ಸೂಚಿಸಲು ಮನವಿ ಮಾಡಿದರು.

ಸಂದರ್ಭದಲ್ಲಿ ಸೈಪುದ್ದೀನ್ ಅವರಾದಿ, ದೇವೇಂದ್ರಪ್ಪ ಹಳ್ಳದ, ಮಲ್ಲಪ್ಪ ಕುರಟ್ಟಿ, ಜೀವನ ಪವಾರ, ಪ್ರಕಾಶ ಶಿಗ್ಲಿ, ಹನಮಂತ ವಾಲಿಕಾರ, ಸುರೇಶ ಮೇಟಿ, ನಂದಿನಿ ಹಾದಿಮನಿ, ಸುನಂದಾ ಬಡ್ಡಿವಡ್ಡರ, ಮುದ್ದಪ್ಪ ನಡುವಿನಮನಿ, ಫಾತಿಮಾ ಹಳ್ಳೂರ, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

25/09/2020 07:46 pm

Cinque Terre

12.8 K

Cinque Terre

1

ಸಂಬಂಧಿತ ಸುದ್ದಿ