ಹುಬ್ಬಳ್ಳಿ: ಆಕೆ ತಾನಾಯಿತು... ತನ್ನ ಸಂಸಾರ ಆಯಿತು ಎಂದುಕೊಂಡು, ಉತ್ತಮ ರೀತಿಯಲ್ಲೇ ಜೀವನ ಸಾಗಿಸುತ್ತಿದ್ದರು. ಆದರೆ, ಏನಾಯಿತೋ ಗೊತ್ತಿಲ್ಲ. ಈ ಮಹಿಳೆಯ ಗಂಡನ ಕುಟುಂಬಸ್ಥರೇ ಈಕೆಗೆ ವಿಲನ್ ಆಗಿದ್ದಾರೆ.
ಹೀಗೆ... ಕಣ್ಣೀರು ಹಾಕುತ್ತಾ ತನ್ನ ಗಂಡನನ್ನು ಹುಡುಕಿಕೊಂಡಿ ಎಂದು ಅಳಲು ತೋಡಿಕೊಳ್ಳುತ್ತಿರುವ ಈ ಮಹಿಳೆಯ ಹೆಸರು ಸುಜಾತ ಸುಧೀರ್ ಅಂಡಿ, ಹುಬ್ಬಳ್ಳಿ ನಿವಾಸಿ. 8 ವರ್ಷಗಳ ಹಿಂದೆ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ಸುಧೀರ್ ಅಂಡಿ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಟ್ಡಿದ್ದರು. ಸುಜಾತ ಅಂದುಕೊಂಡಂತೆ ಜೀವನ ಸುಖಕರವಾಗಿಯೇ ಸಾಗುತ್ತಿತ್ತು.
ಆದರೆ, ಈಗ 3 ವರ್ಷಗಳ ಹಿಂದೆ ಏಕಾಏಕಿ ಗಂಡ ಕಾಣೆಯಾಗಿದ್ದಾನಂತೆ. ಗಂಡನನ್ನು ಹುಡುಕಿ ಸಾಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಗಂಡ ಕಾಣೆಯಾಗಲು ಆಕೆಯ ಅತ್ತೆ- ಮಾವ ಹಾಗೂ ನಾದಿನಿಯರು ಕಾರಣವಂತೆ. ಆತನಿಗೆ ಬೇರೆ ಮದುವೆ ಮಾಡಲು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಸುಜಾತ ಆರೋಪಿಸಿದ್ದಾರೆ.
ಸದ್ಯ, ಇಬ್ಬರು ಮಕ್ಕಳೊಂದಿಗೆ ಹುಬ್ಬಳ್ಳಿ ಮಂಟೂರ್ ರಸ್ತೆ ಬಳಿಯ ನಿವಾಸದಲ್ಲಿರುವ ಈಕೆಗೆ, ಗಂಡನ ಮನೆಯವರು ಅಪರಿಚಿತ ವ್ಯಕ್ತಿಗಳನ್ನು ಕಳುಹಿಸಿ ಕಿರುಕುಳ ನೀಡುವುದರ ಜೊತೆಗೆ, ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿದ್ದಾರಂತೆ. ಈ ಕುರಿತು ಕೇಶ್ವಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ಆರೋಪಿಗಳನ್ನು ಹಿಡಿಯುತ್ತಿಲ್ಲ. ಹೀಗಾಗಿ ನನ್ನ ಗಂಡನನ್ನು ಹುಡುಕಿ ಕೊಡಿ ಹಾಗೂ ತನಗೆ ರಕ್ಷಣೆ ನೀಡುವಂತೆ ಮಾಧ್ಯಮದ ಮುಂದೆ ಸುಜಾತ ಅಂಗಲಾಚಿದ್ದಾರೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
04/08/2022 04:50 pm