ಹುಬ್ಬಳ್ಳಿ: ಕೇಂದ್ರ ಸರ್ಕಾರವು ಒಂದಿಲ್ಲೊಂದು ಯೋಜನೆಗಳನ್ನು ಜನರ ಬಳಿಯಿಂದ ಕಿತ್ತುಕೊಳ್ಳತ್ತಲೇ ಇದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಸಿಗಬೇಕಾದ ಪ್ರಮುಖ ಯೋಜನೆಯನ್ನೇ ಕ್ಲೋಸ್ ಮಾಡಿದೆ. ಯೋಜನೆಯನ್ನು ಮರಳಿ ಅನುಷ್ಠಾನ ಮಾಡಿ ಎಂದು ಹಿರಿಯ ನಾಗರಿಕರು ಕೇಂದ್ರ ಸರ್ಕಾರಕ್ಕೆ ಮನವಿ ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಸಿಕೊಂಡಿಲ್ಲ. ಕೇಂದ್ರ ಸರ್ಕಾರದ ನಡೆಗೆ ಬೇಸತ್ತ ಹಿರಿಯ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಹಿರಿಯ ನಾಗರಿಕ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಹಿರಿಯರ ಸೌಲಭ್ಯಗಳನ್ನೂ ಬಿಡದ ನರೇಂದ್ರ ಮೋದಿ ಅವರ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಹೆಚ್ಚಿನ ಸೌಲಭ್ಯಗಳನ್ನ ನೀಡುವುದನ್ನು ಬಿಟ್ಟು, ಇರುವುದಕ್ಕೆ ಕೇಂದ್ರ ರೇಲ್ವೆ ಇಲಾಖೆ ಕೊಕ್ಕೆ ಹಾಕಿದೆ. ಕಳೆದ ಎರಡೂ ವರ್ಷಗಳಿಂದ ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿದ್ದ ಶೇ 40ರಷ್ಟು ಕಡಿತ ಸ್ಥಗಿತಗೊಂಡಿದೆ. ಭಾರತದ ಉದ್ದಗಲಕ್ಕೂ ಹರಡಿರುವ ರೈಲು ಮಾರ್ಗಗಳಲ್ಲಿ ನಿತ್ಯ ಸಂಚರಿಸುವ ರೈಲುಗಳಲ್ಲಿ ಅಂದಾಜು 1.40 ಕೋಟಿ ರೂ. ಜನರ ಸಂಚಾರಿಸುತ್ತಾರೆ. ಇದು ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಚಟುವಟಿಕೆಯ ರೈಲು ಜಾಲಗಳಲ್ಲಿ ಒಂದಾಗಿದೆ. ಇಂತಹ ವೈಶಿಷ್ಟ್ಯ ಹೊಂದಿರುವ ಭಾರತೀಯ ರೈಲಿನಲ್ಲಿ ಪ್ರಯಾಣಿಸುವ ದರದಲ್ಲಿ ಶೇ.40 ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಕೊರೊನಾ ನಂತರ ಈ ರಿಯಾಯಿತಿಯನ್ನು ಸ್ಥಗಿತ ಮಾಡಲಾಗಿದೆ. ಆಗೊಮ್ಮೆ ಈಗೊಮ್ಮೆ ಸಂಚಾರಿಸುವ ಹಿರಿಯ ಜೀವಿಗಳಿಗೆ ಖರ್ಚು ತುಸು ಭಾರವೆನಿಸಿದೆ.
ಹಿರಿಯ ನಾಗರಿಕರು ತೀರ್ಥ ಕ್ಷೇತ್ರ, ಹೊರ ರಾಜ್ಯಗಳ ಪ್ರಯಾಣಕ್ಕೆ ಹೆಚ್ಚಾಗಿ ರೈಲನ್ನೇ ಅವಲಂಬಿಸಿದ್ದಾರೆ. ರಿಯಾಯಿತಿ ಪ್ರಯಾಣಕ್ಕೆ ಕೊಕ್ಕೆ ಬಿದ್ದಿದ್ದರಿಂದ ಅವರಿಗೆ ಪ್ರಯಾಣ ವೆಚ್ಚ ತುಸು ಹೆಚ್ಚಾಗಿದೆ. ಮೊದಲಿನಂತೆ ರಿಯಾಯಿತಿ ನೀಡಿದಲ್ಲಿ ಹಿರಿಯ ನಾಗರಿಕ ಸಾಕಷ್ಟು ಅನುಕೂಲವಾಗಲಿದೆ. ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಮತ್ತೆ ಮೊದಲಿನಂತೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವುಂತೆ ಅನೇಕ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ. ಈ ಕುರಿತು ಭಾರತೀಯ ರೈಲ್ವೆ ಸಚಿವಾಲಯಕ್ಕೆ ಕೂಡ ಮನವಿ ಪತ್ರ ಕಳುಹಿಸಿದ್ದಾರೆ. ಮನವಿ ಸಲ್ಲಿಸಿದರು ರೈಲ್ವೆ ಮಂಡಳಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ರೈಲಿನಲ್ಲಿ ಸಂಚರಿಸಲು ಹಿರಿಯ ನಾಗರಿಕರಿಗೆ ಅದರಲ್ಲೂ ಬಡ ಮುತ್ತು ಮಧ್ಯಮ ವರ್ಗದ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೊನೆಯ ಪಕ್ಷ ಸ್ಲೀಪರ್ ಕ್ಲಾಸ್ (ಎಸ್‌ಎಲ್) ಮತ್ತು ಸಾಮಾನ್ಯ ಟಿಕೆಟ್ ದರದಲ್ಲಿ ಪ್ರಯಾಣಿಸುವವರಿಗಾದರೂ ರಿಯಾಯಿತಿ ಸೌಲಭ್ಯ ನೀಡಬೇಕಿದೆ. ಇನ್ನಾದರೂ ರೈಲ್ವೇ ಮಂಡಳಿ ರಿಯಾಯಿತಿ ಅನುಷ್ಠಾನಗೊಳಿಸಬೇಕಿದೆ.
Kshetra Samachara
02/08/2022 03:54 pm