ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಆಟೋ ಟಿಪ್ಪರ್ ಚಾಲಕ ವಸಂತ ಸಾವು; ಪರಿಹಾರಕ್ಕೆ ಪಾಲಿಕೆ ಮುಂದೆ ಧರಣಿ

ಹುಬ್ಬಳ್ಳಿ: ಆ ವ್ಯಕ್ತಿ ದುಡಿದು ಇಡಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ, ಮನೆಯ ಜವಾಬ್ದಾರಿ ಆ ವ್ಯಕ್ತಿಯ ಮೇಲಿತ್ತು, ಆದ್ರೆ ವಿಧಿ ಆಟಕ್ಕೆ ಕೆಲಸದಲ್ಲಿರುವಾಗಲೇ ಸಾವನ್ನಪ್ಪಿದ್ದಾನೆ. ವಾಣಿಜ್ಯ ನಗರಿ ಅತಿ ಸುಂದರ ಹಾಗೂ ಸ್ವಚ್ಛಂದವಾಗಿ ಕಾಣಬೇಕಾದರೆ ಪೌರಕಾರ್ಮಿಕರು ಅತಿ ಮುಖ್ಯ. ಆದ್ರೆ ಅದೆ ಕೆಲಸದ ವೇಳೆಯಲ್ಲಿ ಪೌರಕಾರ್ಮಿಕ ಟಿಪ್ಪರ್ ನಿಂದ ಅಪಘಾತವಾಗಿ ಸಾವನ್ನಪ್ಪಿದ್ದಾನೆ. ಆದ್ರೆ ಇನ್ನೂವರೆಗೂ ಆತನಿಗೆ ಪರಿಹಾರ ನೀಡಿಲ್ಲವೆಂದು ಸಂಬಂಧಿಕರು ಹಾಗೂ ದಲಿತ ಸಂಘಟನೆಗಳು ಪಾಲಿಕೆ ಆವರಣದ ಮುಂದೆ ಧರಣಿಗೆ ಕುಳತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಸದ ಟಿಪ್ಪರ್‌ನಲ್ಲಿದ್ದ ಕಸವನ್ನು ಲಿಪ್ಟ್ ಮಾಡುವ ಸಂದರ್ಭದಲ್ಲಿ ಬೋಲ್ಟ್ ಬಿಚ್ಚಿದ ಪರಿಣಾಮ ಟಿಪ್ಪರ್ ಚಾಲಕ ವಸಂತ ಇಳಕಲ್ ಎಂಬಾತ ಸಾವನ್ನಪ್ಪಿದ್ದಾನೆ. ವಸಂತ ಟಿಪ್ಪರನ್ನು ಸ್ವತಃ ತಾನೇ ಸರಿಪಡಿಸಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಕೂಡಲೆ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರು ಏನು ಪ್ರಯೋಜನವಾಗಲಿಲ್ಲ. ವಸಂತ ಕಿಮ್ಸ್ ನಲ್ಲಿ ಕೊನೆ ಉಸಿರು ಎಳೆದಿದ್ದಾನೆ. ಘಟನೆ ವಿಷಯ ಹಬ್ಬುತ್ತಲೇ ಕಿಮ್ಸ್ ಆವರಣದ ಮುಂದೆ ಜನರು ಮುಗಿ ಬಿದ್ದಿದ್ದರು. ವಸಂತ ಭೇಟಿಗೆ ಕಿಮ್ಸ್ ಆಸ್ಪತ್ರೆಗೆ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪಾಲಿಕೆ ಆಯುಕ್ತರು ಭೇಟಿ ನೀಡಿ ವಸಂತ ಕುಟುಂಬಕ್ಕೆ ಪರಿಹಾರ ಒದಗಿಸುತ್ತೆವೆ ಎಂದಿದ್ದರು ಆದ್ರೆ ಯಾವುದೆ ರೀತಿಯ ಒಂದು ನಯಾ ಪೈಶಾ ಕೂಡ ಬಂದಿಲ್ಲಾ.

ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರು ಹೇಳಿದಂತೆ ಇನ್ನೂವರೆಗೂ ವಸಂತ ಕುಟುಂಬಕ್ಕೆ ಪರಿಹಾರ ಭಾಗ್ಯ ಕೂಡಿ ಬಂದಿಲ್ಲಾ. ಆದ ಕಾರಣ ಪಾಲಿಕೆಯ ಎಲ್ಲ ಆಟೋ ಟಿಪ್ಪರ್ ಚಾಲಕರು ಹಾಗೂ ಕುಟುಂಬಸ್ಥರು, ದಲಿತ ಸಂಘಟನೆಗಳು ಪಾಲಿಕೆ ಆವರಣದ ಮುಂದೆ ಕುಳಿತು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಪರಿಹಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಪಾಲಿಕೆ ಕೆಲಸದ ವೇಳೆಯಲ್ಲಿಯೇ ವಸಂತ ಸಾವನ್ನಪ್ಪಿದ್ದಾನೆ. ಆದಷ್ಟು ಬೇಗ ಪಾಲಿಕೆ ವಸಂತ ಕುಟುಂಬಕ್ಕೆ ಪರಿಹಾರ ಒದಗಿಸಬೇಕು

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Somashekar
Kshetra Samachara

Kshetra Samachara

25/07/2022 10:02 pm

Cinque Terre

56.06 K

Cinque Terre

3

ಸಂಬಂಧಿತ ಸುದ್ದಿ