ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಗಡಿ ನಂಬಿಕೊಂಡು ಜೀವನ ಮಾಡ್ತಿದ್ದೇವು; ಬದುಕು ಅತಂತ್ರವಾಯಿತೇ...?

ಹುಬ್ಬಳ್ಳಿ: ಬೆಳ್ಳಂಬೆಳಿಗ್ಗೆಯೇ ಆ ಸ್ಥಳದಲ್ಲಿ ವ್ಯಾಪಾರಸ್ಥರು ಮತ್ತು ಗ್ರಾಹಕರ ನಡುವೆ ಮಾತುಕತೆ ಜೋರಿರುತ್ತಿತ್ತು. ಆದರೆ ಇಂದು ಬೆಳಿಗ್ಗೆ ಮಾತ್ರ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು..? ಅಧಿಕಾರಿಗಳ ಜೊತೆಗೆ ಮತಿನ ಚಕಮಕಿಗೆ ವ್ಯಾಪಾರಸ್ಥರು ಇಳಿಯಲು ಕಾರಣವೇನು ಅಂತ ನೀವೇ ನೋಡಿ..

ಹೀಗೆ ಪೊಲೀಸರ ಜೊತೆ ಮಾತಿಗಿಳಿದಿರುವ ವ್ಯಾಪಾರಸ್ಥರು. ಮತ್ತೊಂದು ಕಡೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳರಿಗೆ ವ್ಯಾಪಾರಸ್ಥರ ಪ್ರಶ್ನೆಗಳ ಸುರಿಮಳೆ.

ಮತ್ತೊಂದು ಭಾಗದಲ್ಲಿ ಚಿಕ್ಕ ಚಿಕ್ಕ ಅಂಗಡಿಗಳನ್ನ ತೆರವು ಮಾಡುತ್ತಿರುವ ದೃಶ್ಯಗಳು. ಹೌದು ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿ ಹೃದಯ ಭಾಗದಲ್ಲಿರುವ ಸಂಗೊಳ್ಳಿ ವೃತ್ತದ ಬಳಿ ಇರುವ ಜನತಾ ಬಜಾರ್ ನಲ್ಲಿ. ಬೆಳ್ಳಂಬೆಳಿಗ್ಗೆ ಜೆಸಿಬಿ ಮೂಲಕ ಆಗಮಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಇಲ್ಲಿದ್ದ 170ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಿದರು. ಅದಕ್ಕೆ ಕಾರಣವೇ ಸ್ಮಾರ್ಟ್ ಸಿಟಿ ಯೋಜನೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನತಾ ಬಜಾರ್ ಗೆ 18 ಕೋಟಿ ಹಣವನ್ನ ಮಿಸಲಿಟ್ಟಿದ್ದು, ಅದನ್ನು ಇದೀಗ ಕಾಮಗಾರಿ ಆರಂಭಿಸಲಾಗಿದೆ. ಆದರೆ ಕಾಮಗಾರಿಗೆ ಸ್ಥಳೀಯ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ..

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದರೆ ವ್ಯಾಪರಸ್ಥರಿಂದ ವಿರೋಧ ವ್ಯಕ್ತವಾಗಿತ್ತು.. ಈಗಾಗಲೇ ಈ ಸ್ಥಳದಿಂದ ಹುಬ್ಬಳ್ಳಿಯ ಹೊಸೂರಿನಲ್ಲಿ ಸ್ಥಳಾವಕಾಶ ಮಾಡಲಾಗಿದೆ.

ಆದ್ರೆ ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನ ನೀಡದೆ ಇರೋದು ಸದ್ಯ ಸ್ಥಳೀಯ ವ್ಯಾಪರಸ್ಥ ಆಕ್ರೋಶಕ್ಕೆ ಕಾರಣವಾಗಿದೆ. ಆಯ್ದ ವ್ಯಾಪರಸ್ಥರಿಗೆ ಮಾತ್ರ ಅಲ್ಲಿ ಸ್ಥಳಾವಕಾಶ ನೀಡಿದ್ದು ಇನ್ನುಳಿದ ಚಿಕ್ಕ ಪುಟ್ಟ ವ್ಯಾಪಾರಸ್ಥರು ಎಲ್ಲಿ ವ್ಯಾಪಾರ ಮಾಡಬೇಕು ಅಂತ ಪ್ರಶ್ನೆ ಮಾಡಿದ್ದಾರೆ.

ಪಾಲಿಕೆ ನಿಯಮದ ಪ್ರಕಾರ ಜಾಗವನ್ನ ಸುಪರ್ದಿಗೆ ಪಡೆದಿದ್ದು ನಮ್ಮ ಮೂಲ ಸ್ಥಾನವನ್ನ ಆದಷ್ಟು ಬೇಗ ನವೀಕರಣಗೊಳಿಸಿ ನಮಗೆ ನೀಡಿ ಅಂತ ವ್ಯಾಪಾರಸ್ಥರ ಒತ್ತಾಯವಾಗಿದೆ. ಕೊರೊನಾ ನಡುವೆಯೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡೋದು ಕಷ್ಟವಾಗಿದ್ದು ನಮ್ಮ ಮಾರ್ಕೆಟ್ ನಮಗೆ ಮತ್ತೆ ಸಿಗುವಂತೆ ಕಲ್ಪಿಸಿಕೊಡಿ ಅನ್ನೋದೇ ಇಲ್ಲಿನ ವ್ಯಾಪರಸ್ಥರ ಒತ್ತಾಯವಾಗಿದೆ..

Edited By : Manjunath H D
Kshetra Samachara

Kshetra Samachara

25/11/2020 08:55 pm

Cinque Terre

88.66 K

Cinque Terre

6

ಸಂಬಂಧಿತ ಸುದ್ದಿ