ಕಲಘಟಗಿ: ಎಮ್.ಎಸ್.ಐ.ಎಲ್ ಲಿಕ್ಕರ್ ಶಾಪ್ ಬಾಗಿಲು ಮುಚ್ಚುವಂತೆ ಒತ್ತಾಯಿಸಿ ಕಲಘಟಗಿ ಪಟ್ಟಣದಲ್ಲಿ ಸರ್ಕಾರಿ ಮದ್ಯದಂಗಡಿ ವಿರುದ್ಧ ಮಹಿಳೆಯರ ಹೋರಾಟ ನಡೆಸಿದರು.
ಬಾಗವಾನ್ ಓಣಿಯಲ್ಲಿ ತೆರೆಯಲಾಗಿರುವ ನೂತನ ಎಮ್.ಎಸ್.ಐ.ಎಲ್ ಮದ್ಯದಂಗಡಿಯ ಸ್ಥಳದಲ್ಲಿ ಮಹಾಲಕ್ಷ್ಮೀ ದೇವಸ್ಥಾನ, ದರ್ಗಾ, ಶಾಲೆಗಳಿವೆ.
ಮಹಿಳೆಯರು, ವಿದ್ಯಾರ್ಥಿಗಳು ಓಡಾಡುವ ಜಾಗದಲ್ಲಿ ಲಿಕ್ಕರ್ ಶಾಪ್ ತೆರೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಬಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು,ಜನವಸತಿ ಪ್ರದೇಶದಲ್ಲಿರುವ ಮದ್ಯದಂಗಡಿಯನ್ನು ಕೂಡಲೆ ಬಂದ್ ಮಾಡುವಂತೆ ಆಗ್ರಹಿಸಿದರು.ಅಬಕಾರಿ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
09/10/2020 07:08 pm