ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಅಪಾಯಕಾರಿ: ಆತಂಕದ ಸ್ಥಿತಿಯಲ್ಲಿ ಪೊಲೀಸ್ ಇಲಾಖೆ

ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ‌ ಇಡೀ ಮನು ಕುಲವನ್ನು ತಲ್ಲಣಗೊಳಿಸಿದೆ.‌ ಎಲ್ಲಾ ಕ್ಷೇತ್ರಗಳ ಮೇಲೂ ಕೊರೊನಾ ಕರಿನೆರಳು ಆವರಿಸಿದೆ.‌ಇದು ಪೊಲೀಸ್ ಇಲಾಖೆಯನ್ನೂ ಬಿಟ್ಟಿಲ್ಲ.

ಹೌದು... ಕೊರೊನಾ ವೈರಸ್ ಭೀತಿಗೆ ಪೊಲೀಸರನ್ನು ಭಯಭೀತರನ್ನಾಗಿಸಿದೆ. ಪೊಲೀಸ್ ಇಲಾಖೆಯೂ ಕೂಡ ಕೊರೊನಾ ವೈರಸ್ ಹರಡುವಿಕೆಯ ಭೀತಿಯಿಂದಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದರಿಂದ ಪೊಲೀಸರು ತಾತ್ಕಾಲಿಕವಾಗಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಯನ್ನೇ ನಿಲ್ಲಿಸಿದ್ದಾರೆ.

ಆದ್ರೆ ವಾಣಿಜ್ಯ ನಗರಿ ಪೊಲೀಸರು ಅಲ್ಲಲ್ಲಿ ಡ್ರಿಂಕ್ ಆ್ಯಂಡ್ ಡ್ರೈ ತಪಾಸಣೆ ನಡೆಸುತ್ತಿರುವದು ಆತಂಕಕ್ಕೆ ದೂಡಿದೆ.ಮನುಷ್ಯರ ಉಸಿರಾಟ, ಸ್ಪರ್ಶದಿಂದ ಕೊರೊನಾ ವೈರಸ್ ಸೋಂಕು ಹರಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುಚ್ಚರಿಕೆ ವಹಿಸಬೇಕಾದ ಅವಳಿ ನಗರ ಪೊಲೀಸರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ತಪಾಸಣೆ ನಡೆಸಲಾಗುತ್ತಿದೆ.

ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೋಂಕು ಹರಡುವಿಕೆ ತಪ್ಪಿಸಲು ತಪಾಸಣೆ ಮಾಡದಂತೆ ಆದೇಶ ನೀಡಿದೆ.

ಒಂದೇ ಯಂತ್ರವನ್ನು ಬಳಸಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಯನ್ನು ನಡೆಸಲಾಗುತ್ತದೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಆದೇಶ ನೀಡುವವರೆಗೂ ತಪಾಸಣೆಗೆ ತಡೆ ನೀಡಲಾಗಿದೆ. ಮುಂದಿನ ಆದೇಶ ನೀಡುವವರೆಗೂ ಯಾವುದೇ ರೀತಿ ತಪಾಸಣೆ ನಡೆಸದಂತೆ ಸೂಚನೆ ನೀಡಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಚಾರ ವಿಭಾಗದ ಡಿಸಿಪಿ ಬಸರಗಿ ಅವರು ಮೊದ ಮೊದಲು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಫೋನ್ ನಲ್ಲಿ ಪ್ರತಿಕ್ರಿಯೇ‌ ನೀಡಿದ ಅವರು, ಕೊರೊನಾ ಸೋಂಕು ಹರಡುವ ಭೀತಿಯಿಂದ ತಪಾಸಣೆ ನಡೆಸುತ್ತಿಲ್ಲ ಅನ್ನುತ್ತಿದ್ದಾರೆ. ಆದರೂ ನಗರದ ಕೆಲವು ಕಡೆ ತಪಟಸಣೆ ನಡೆಸಲಾಗುತ್ತಿದೆ. ಇದರಿಂದ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಿದೆ.

Edited By : Nagesh Gaonkar
Kshetra Samachara

Kshetra Samachara

30/09/2020 11:51 am

Cinque Terre

36.44 K

Cinque Terre

2

ಸಂಬಂಧಿತ ಸುದ್ದಿ