ಅಣ್ಣಿಗೇರಿ: ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಎಲ್ಲ ಬೀದಿಗಳಲ್ಲಿ ಗಲೀಜು ನೀರು ನಿಂತು ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಅದರ ಜೊತೆಗೆ ಜಿಟಿಜಿಟಿ ಮಳೆಯು ಕೈ ಜೋಡಿಸಿದ್ದರಿಂದ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿದೆ.
ಗ್ರಾಮಸ್ಥರ ಬಾಗಿಲುಗಳಲ್ಲಿ ಗಲೀಜು ನೀರು ನಿಲ್ಲುತ್ತಿರುವದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಹಾಗೂ ದುರ್ವಾಸನೆಯಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಡೆಂಗ್ಯೂ ಮಲೇರಿಯಾ ರೋಗದ ಭಯದಲ್ಲಿ ಅಲ್ಲಿನ ನಿವಾಸಿಗಳು ದಿನಗಳಿಯುತ್ತಿದ್ದಾರೆ.
ಇನ್ನೂ ಯಾರಾದರೂ ಗ್ರಾಮದಲ್ಲಿ ತೀರಿ ಹೋದರೆ ಶವವನ್ನು ಇದೇ ದಾರಿಯಲ್ಲಿ ಸಾಗಿಸಬೇಕಾದರೆ ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿಕೊಳ್ಳುತ್ತಿದ್ದಾರೆ.
ಈ ವಿಷಯವಾಗಿ ಪಂಚಾಯಿತಿ ಮುಖ್ಯಾಧಿಕಾರಿ ಪ್ರದೀಪ್ ಚಾಲುಕ್ಯ ಅವರಿಗೆ ಅಲ್ಲಿನ ನಿವಾಸಿಗಳು ಫೋನ್ ಮಾಡಿದಾಗ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಯ ಉದ್ಧಟತನದ ಮಾತುಗಳನ್ನಾಡಿದ್ದಾರೆ.
ಇವರ ಈ ಬೇಜವಾಬ್ದಾರಿ ಮಾತುಗಳು ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿ ಈ ರೀತಿ ಮಾತನಾಡುತ್ತಿರುವುದು ಎಷ್ಟು ಸರಿ, ಈ ವಿಷಯವಾಗಿ ಹಿರಿಯ ಅಧಿಕಾರಿ ಕಾಂಬ್ಳೆ ಅವರಿಗೆ ಫೋನ್ ಮಾಡಿದ್ರೆ ಅವ್ರು ಕೂಡಾ ದಾಗ ಫೋನ್ ತೆಗೆಯದಿಲ್ಲ ಎಂದು ಅಲ್ಲಿನ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಇಂತ ಅಧಿಕಾರಿಗಳಿಗೆ ಬುದ್ಧಿ ಕಲಿಸಿ ಸಾರ್ವಜನಿಕರ ಜೊತೆ ಮತ್ತು ಸಾರ್ವಜನಿಕ ವಲಯಗಳಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ಕಲಿಸಿಕೊಡಬೇಕು ಎಂದು ಅಲ್ಲಿನ ನಿವಾಸಿಗಳು ಹೇಳಿದರು.
Kshetra Samachara
14/07/2022 04:47 pm