ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಿಕೆ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಮುಖಂಡ; ಇಂದು ವಿಚಾರಣೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ಪಾಲಿಕೆ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.

ಹೌದು..ಈದ್ಗಾ ಮೈದಾನದಲ್ಲಿ ಮೂರು ದಿನ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಿದ್ದ ಪಾಲಿಕೆಯ ನಡೆಯನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಪರ ವಿರೋಧ ಚರ್ಚೆಯ ನಡುವೆ ಸದನ ಸಮಿತಿ ರಚಿಸಿದ್ದ ಪಾಲಿಕೆ ಸಮಿತಿ ವರದಿ ಆಧರಿಸಿ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಿತ್ತು. ನಿನ್ನೆ ರಾತ್ರಿಯಷ್ಟೆ ಪರವಾನಗಿ ನೀಡಿದ್ದ ಪಾಲಿಕೆಯ ನಡೆಯನ್ನು ಪ್ರಶ್ನಿಸಿ ಸದ್ಯ ನ್ಯಾಯಾಲಯದ ಮೆಟ್ಟಿಲೇರಿದೆ.

ಇನ್ನೂ ಸದನ ಸಮೀತಿ ವರದಿ ಮತ್ತು ಪಾಲಿಕೆಯ ಆದೇಶ ಪ್ರಶ್ನಿಸಿ ಮುಸ್ಲಿಂ ಮುಖಂಡ ಸಾಧಿಕ್ ಗುಡವಾಲಾ ರಿಂದ ದಾವೆ ಹೂಡಿದ್ದು, ಇಂದು ಅರ್ಜಿ ವಿಚಾರಣೆ ನಡೆಯಲಿದೆ.

Edited By : Abhishek Kamoji
Kshetra Samachara

Kshetra Samachara

30/08/2022 02:45 pm

Cinque Terre

18.5 K

Cinque Terre

11

ಸಂಬಂಧಿತ ಸುದ್ದಿ