ಕುಂದಗೋಳ : ಜಿಲ್ಲಾ ಬಾಲಕಾರ್ಮಿಕರ ಯೋಜನಾ ಅಧಿಕಾರಿಗಳು ನೇತೃತ್ವದಲ್ಲಿ ಇಂದು ಕುಂದಗೋಳ ಪಟ್ಟಣದ ಅಂಗಡಿ ಮುಂಗಟ್ಟುಗಳು ಹೋಟೆಲ್ ಕಿರಾಣಿ ಬೇಕರಿಗಳನ್ನು ಪರಿಶೀಲನೆ ನಡೆಸಿ ಬಾಲ ಮತ್ತು ಕಿಶೋರ್ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅರಿವು ಮೂಡಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಬಾಲ ಕಾರ್ಮಿಕರು, ಕಿಶೋರ ಮಕ್ಕಳ ತಪಾಸಣೆ ಹಠಾತ್ ದಾಳಿ ಕಾರ್ಯಕ್ರಮದಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರಿಗೆ ನೋಟಿಸ್ ನೀಡಲಾಯಿತು.
ಕುಂದಗೋಳ ಪಟ್ಟಣದ ಮಾರ್ಕೆಟ್ ರಸ್ತೆ, ಮೂರಂಗಡಿ ಕ್ರಾಸ್ ಬಸ್ ನಿಲ್ದಾಣದ ಸುತ್ತಮುತ್ತಲಿನ ವಾಣಿಜ್ಯ ಮಳಿಗೆ ಹೋಟಲ್‌ಗಳನ್ನು ತಪಾಸಣೆ ನಡೆಸಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅರಿವು ಮೂಡಿಸಿ ಸಹಾಯವಾಣಿ ಸಂಖ್ಯೆ ಇರುವ ನಾಮಪತ್ರ ಅಂಗಡಿ ಮುಂಗಟ್ಟುಗಳಿಗೆ ಅಂಟಿಸಲಾಯಿತು.
Kshetra Samachara
01/04/2022 03:29 pm