ನವಲಗುಂದ: ಸರಿಯಾದ ವೇಳೆಗೆ ಬಸ್ ವ್ಯವಸ್ಥೆ ಇಲ್ಲದ ಹಿನ್ನೆಲೆ ನವಲಗುಂದ ತಾಲ್ಲೂಕಿನಲ್ಲಿ ಆಗಾಗ ಬಸ್ ತಡೆದು ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಈಗ ಬೆಳವಟಗಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅದಕ್ಕೆ ಕಾರಣ ಸಮರ್ಪಕ ಬಸ್ ಸಂಚಾರ ಇಲ್ಲದಿರೋದು.
ಎಸ್. ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಹಿನ್ನೆಲೆ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಬಸ್ ತಡವಾಗಿ ಬಂದಿದೆ. ಈ ಹಿನ್ನೆಲೆ ಬಸ್ ಸಂಪೂರ್ಣ ಭರ್ತಿಯಾಗಿದೆ. ನಿಲ್ಲಲು ಸಹ ಸ್ಥಳವಿಲ್ಲದ ಬಸ್‌ನಲ್ಲಿ ತೆರಳಲಾಗದೆ ವಿದ್ಯಾರ್ಥಿಗಳು ಆಕ್ರೋಶಗೊಂಡು ಮಳೆಯಲ್ಲಿಯೇ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಗಂಟೆಗಟ್ಟಲೆ ಮಳೆಯಲ್ಲಿಯೇ ನಿಂತು ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುವ ಪರಿಸ್ಥಿತಿ ಬಂದಿರೋದು ಮಕ್ಕಳ ವಿದ್ಯಾಭ್ಯಾಸಕ್ಕೂ ಪೆಟ್ಟು ನೀಡುವುದರಲ್ಲಿ ಸಂಶಯವಿಲ್ಲಾ. ಈ ಬಗ್ಗೆ ನವಲಗುಂದ ಘಟಕ ವ್ಯವಸ್ಥಾಪಕರು ಗಮನ ಹರಿಸಬೇಕಿದೆ. ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕಿದೆ.
Kshetra Samachara
12/07/2022 01:37 pm