ಕಲಘಟಗಿ:ಹತ್ತು ವರ್ಷ ಸೇವೆ ಮಾಡಿದರೂ ಸರಕಾರ ಸೇವಾ ಭದ್ರತೆ ನೀಡುತ್ತಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಒಳ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸೇವೆಯಿಂದ ದೂರ ಉಳಿದರು.
ಸರಕಾರ ತಿಂಗಳಿಗೆ ಹತ್ತು ಸಾವಿರ ನೀಡುವ ವೇತನ ಯಾವುದಕ್ಕೂ ಸಾಲುತ್ತಿಲ್ಲ ಹಾಗೂ ಮುಷ್ಕರ ಮಾಡಿದ ಪ್ರತಿಸಲ ಸರಕಾರ ಭರವಸೆಯನ್ನು ಮಾತ್ರ ನೀಡುತ್ತಿದೆ ಆದರೆ ನಮಗೆ ಸೇವಾ ಭದ್ರತೆಯನ್ನು ಒದಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಷ್ಕರದಲ್ಲಿ ಪಾಲ್ಗೊಂಡ ಸಿಬ್ಬಂದಿ ತಮ್ಮ ಸಮಸ್ಯೆಯನ್ನು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಿದರು.
Kshetra Samachara
05/10/2020 04:55 pm