ಹುಬ್ಬಳ್ಳಿ: ಅವರೆಲ್ಲ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ನ ಖಡಕ್ ಖಾಕಿ ಪಡೆಯ ಸಿಬ್ಬಂದಿಗಳು. ಇಷ್ಟು ದಿನ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದವರು ಇಂದು ಸಂಜೆ ಏಕಾಏಕಿ ಒಂದೆಡೆಗೆ ಜಮಾವಣೆಗೊಂಡಿದ್ದರು.
ನೂರಾರು ಖಾಕಿ ಪಡೆಯ ಸಿಬ್ಬಂದಿಗಳು ಚೆನ್ನಮ್ಮ ವೃತ್ತದಲ್ಲಿ ಸೇರಿ,ವಿಶೇಷ ಆಚರಣೆಯೊಂದನ್ನು ಕೈಗೊಂಡಿದ್ದರು. ಅಷ್ಟಕ್ಕೂ ಖಾಕಿ ಪಡೆ ಆಚರಣೆ ಮಾಡಿರುವುದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಅಂಗವಾಗಿ ದೇಶವೇ ಏಕತಾ ದಿನ ಆಚರಣೆ ಮಾಡುತ್ತಿದೆ ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಚೆನ್ನಮ್ಮ ವೃತ್ತದಿಂದ ಕೋರ್ಟ್ ಸರ್ಕಲ್ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್ ವರೆಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ನಾವೆಲ್ಲರೂ ಒಂದೇ ನಮ್ಮಲ್ಲಿ ಭಿನ್ನತೆ ಬೇಡ ಏಕತೆ ಇರಲಿ ಎಂದು ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಇಂತಹದೊಂದು ವಿನೂತನ ಕಾರ್ಯಕ್ಕೆ ಮುಂದಾಗಿದೆ.
ಹು-ಧಾ ಮಹಾನಗರ ಪೊಲೀಸ್ ಉಪ ಆಯುಕ್ತರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಏಕತಾ ರ್ಯಾಲಿಗೆ ಚಾಲನೆ ನೀಡಿದರು.
ದಿನವೂ ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಇಂದು ರಸ್ತೆಗೆ ಇಳಿದು ರಾಷ್ಟ್ರೀಯ ಏಕತಾ ದಿನಾಚರಣೆ ಆಚರಣೆ ಮಾಡಿದರು.
ದೇಶ ಭಕ್ತಿಗೀತೆಗಳ ಗಾಯನ,ಪೊಲೀಸ್ ಸಿಬ್ಬಂದಿಗಳ ಕವಾಯತು ನೋಡುಗರಲ್ಲಿ ಶಿಸ್ತನ್ನು ಕಲಿಸುವಂತಿತ್ತು. ಪೊಲೀಸ್ ಬೂಟಿನ ಸಪ್ಪಳ ಎಲ್ಲರನ್ನೂ ಎಚ್ಚರಿಸುವಂತೆ ಮಾಡಿತು. ದಿಟ್ಟತನದ ನಡುಗೆ ಎಲ್ಲರಲ್ಲಿಯೂ ಒಂದು ಆತ್ಮವಿಶ್ವಾಸ ಹೆಚ್ಚಿಸಿದ್ದು,ಕರ್ತವ್ಯದ ಜೊತೆಗೆ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಏಕತಾ ದಿನ ಆಚರಣೆ ವಿಶೇಷವಾಗಿತ್ತು.
Kshetra Samachara
31/10/2020 09:58 pm