ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಲರ್ಟ್ ಆದ ಗರಗ ಪೊಲೀಸರು: ಮಾಸ್ಕ್ ಇಲ್ಲದೇ ಸುತ್ತಾಡಬೇಡಿ

ಧಾರವಾಡ: ಕೊರೊನಾ ಮೂರನೇ ಅಲೆ ಜೋರಾಗಿಯೇ ಸದ್ದು ಮಾಡುತ್ತಿದೆ. ಸೋಂಕನ್ನು ಹತೋಟಿಗೆ ತರುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದೆ.

ಈಗಾಗಲೇ ಪೊಲೀಸರು ಕೂಡ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಉಲ್ಬಣವಾಗದಂತೆ ಪೊಲೀಸರು ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಈ ಮಧ್ಯೆ ಗರಗ ಠಾಣೆ ಪಿಎಸ್ಐ ಕಿರಣ್ ಮೋಹಿತೆ ನೇತೃತ್ವದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕೇವಲ ವೀಕೆಂಡ್ ಕರ್ಫ್ಯೂ ಮಾತ್ರವಲ್ಲದೇ ದಿನನಿತ್ಯ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುವ ಹಾಗೂ ಸರ್ಕಾರದ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

17/01/2022 02:02 pm

Cinque Terre

29.02 K

Cinque Terre

0

ಸಂಬಂಧಿತ ಸುದ್ದಿ