ಹುಬ್ಬಳ್ಳಿ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಸರಕಾರ ಹಲವು ಸೂಚನೆಗಳನ್ನ ಪಾಲನೆ ಮಾಡುವಂತೆ ಸಾರ್ವಜನಿಕರಿಗೆ ವಿನಂತಿಸಿಕೊಂಡಿದೆ. ಅದನ್ನ ಪಾಲನೆ ಮಾಡುವಲ್ಲಿ ಸ್ವಲ್ಪ ಏರುಪೇರಾದರೂ, ಪೊಲೀಸರು ಅದ್ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ನೀವೆ ನೋಡಿ...
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿಕೇಂಡ್ ಕರ್ಫ್ಯೂ ಜಾರಿ ಮಾಡಿದೆ. ಆದರೆ ಬೈಕ್ ಸವಾರನೊಬ್ಬ ಯಾವುದೋ ಒಂದು ಕಾರಣಕ್ಕೆ ಹೊರ ಬಂದಿದ್ದಾನೆ. ಹಳೇ ಹುಬ್ಬಳ್ಳಿಯ ಪೊಲೀಸರು ತಪಾಸಣೆ ಮಾಡುತ್ತಿರುವ ವೇಳೆ ಬೈಕ್ ಹಿಡಿದಾಗ ಬೈಕ್ ಸವಾರ ನಂದು ತಪ್ಪಾಗಿದೆ ಬಿಡಿ ಎಂದು ಅಂಗಲಾಚಿದ್ದಾನೆ. ಹಳೇ ಹುಬ್ಬಳ್ಳಿ ಪೊಲೀಸರು ಯಾವುದನ್ನು ಲೆಕ್ಕಿಸದೆ ಆ ಬೈಕ್ ಸವಾರನನ್ನು ಎಳೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಈ ದೃಶ್ಯವನ್ನು ಅಲ್ಲೆ ಇದ್ದ ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕೂಡಲೇ ಹುಬ್ಬಳ್ಳಿ ಧಾರವಾಡ ಪೊಲೀಸರು ಆಯುಕ್ತರು ಇತ್ತ ಗಮನಿಸಿ ಇಂತಹ ಘಟನೆ ಆಗದಂತೇ ಸಿಬ್ಬಂದಿಗಳಿಗೆ ತಾಕೀತು ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Kshetra Samachara
15/01/2022 07:22 pm