ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತೋಟಗಾರಿಕೆ ಇಲಾಖೆಯ ಕಡತ ಪರಿಶೀಲಿಸಿದ ಎಸಿಬಿ

ಕುಂದಗೋಳ : ಮೊನ್ನೆ ತಾನೇ ಜಮೀನಿನಲ್ಲಿದ್ದ ಮರಗಳ ಮಾಹಿತಿ ನೀಡಲು ಹುಬ್ಬಳ್ಳಿಯ ಮುತ್ತುಗೌಡ ಗಂಗನಗೌಡರ ಎಂಬುವವರಿಗೆ 50 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು 10 ಸಾವಿರ ಹಣ ಪಡೆದು ಉಳಿದ ಹಣ ಪಡೆಯುವಾಗ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಹಲಕುರ್ಕಿ ಎಸಿಬಿ ಬಿಲೆಗೆ ಬಿದ್ದಿರುವುದು ಗೊತ್ತಿರುವ ವಿಚಾರ.

ಈ ವಿಚಾರವಾಗಿ ಇಂದು ಕುಂದಗೋಳದ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿದ ಎಸಿಬಿ ಅಧಿಕಾರಿಗಳು ಇಲಾಖೆಯ ಸಂಪೂರ್ಣ ಕಡತಗಳನ್ನು ಪರಿಶೀಲಿಸಿದರು.

ಯಾವ ಯಾವ ಕಡತಗಳಲ್ಲಿ ಏನೇನಿವೆ ? ಮತ್ತು ಇಲಾಖೆಯ ಕಂಪ್ಯೂಟರ್ ಒಳಗೆ ಅಡಕವಾಗಿರುವ ಪ್ರತಿಯೊಂದು ಡಾಟ್ ವನ್ನು ತಮ್ಮ ಸುಪರ್ದಿಗೆ ಪಡೆದರು.

ಈ ವೇಳೆ ಇಲಾಖೆಗೆ ಆಗಮಿಸುವ ಸಾರ್ವಜನಿಕ ಪ್ರವೇಶಕ್ಕೆ ತೊಂದರೆ ನೀಡದೆ ತಮ್ಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಸುಮಾರು ಎರಡು ಮೂರು ಗಂಟೆಗಳ ಕಾಲ ತಮ್ಮ ಕಾರ್ಯಾಚರಣೆ ನಡೆಸಿದರು.

Edited By : Nirmala Aralikatti
Kshetra Samachara

Kshetra Samachara

16/12/2020 03:56 pm

Cinque Terre

22.33 K

Cinque Terre

1

ಸಂಬಂಧಿತ ಸುದ್ದಿ