ಹುಬ್ಬಳ್ಳಿ- ವ್ಯಸನಮುಕ್ತ ಭಾರತ ನಿರ್ಮಾಣಕ್ಕಾಗಿ ಯುವ ಪೀಳಿಗೆಯನ್ನು ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಂದು, ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
18 ವಯೋಮಿತಿ ಕೆಳಗಿನ ಮಕ್ಕಳು ಹೆಚ್ಚು ತಂಬಾಕು ವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನ ಹಾಳು ಮಾಡಿಕೊಳ್ಳುತ್ತಿದ್ದು, ಅದನ್ನು ತಡೆಗಟ್ಟಲು, ವ್ಯಸನ ಮುಕ್ತ ಭಾರತ ನಿರ್ಮಾಣಕ್ಕಾಗಿ ಮತ್ತು ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ಇಂದು, ನಗರದಲ್ಲಿ ಗುಟ್ಕಾ ಮಾರಾಟಗಾರರಿಗೆ 18 ವರ್ಷದ ವಯೋಮಿತಿ ಕೆಳಗಿನ ಮಕ್ಕಳಿಗೆ, ಗುಟ್ಕಾ ಮಾರಾಟ ಕಾನೂನು ಬಾಹಿರ ಮತ್ತು ಜೈಲು ಶಿಕ್ಷೆ ನೀಡಲಾಗುತ್ತೇ ಎಂದು ಗುಲಾಬಿ ಹೂವು ನೀಡುವ ಮೂಲಕ ಗುಟಕಾ ಮಾರಾಟಗಾರರಿಗೆ ಜಾಗೃತಿ ಮೂಡಿಸಿದರು.
Kshetra Samachara
16/12/2020 02:33 pm