ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇಂದು ಕೂಡ ಹಲವರನ್ನು ಧಾರವಾಡದ ಉಪನಗರ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದರು.
ನಟರಾಜ, ಸೋಮು ನ್ಯಾಮಗೌಡ, ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೆಕರೆ ಹಾಗೂ ಬಸವರಾಜ ಮುತ್ತಗಿ ಅವರನ್ನು ಕರೆಯಿಸಿ ವಿಚಾರಣೆ ನಡೆಸಿದರು.
ನಟರಾಜ್, ವಿನಯ ಕುಲಕರ್ಣಿ ಅವರ ಡೇರಿ ಉಸ್ತುವಾರಿ ವಹಿಸಿಕೊಂಡವರು. ಸೋಮು ಅವರು ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದರು. ಇದರ ಜೊತೆಗೆ ಪ್ರಶಾಂತ ಕೆಕರೆ ಹಾಗೂ ಬಸವರಾಜ ಮುತ್ತಗಿ ಅವರನ್ನು ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
15/12/2020 01:33 pm