ನವಲಗುಂದ : ಸಾರಿಗೆ ನೌಕರರ ಮುಷ್ಕರ ನವಲಗುಂದದ ಬಸ್ ನಿಲ್ದಾಣದಲ್ಲಿ ಇಂದು ಸಹ ಮುಂದುವರೆದಿದ್ದು, ಪ್ರತಿಭಟನೆಗೆ ಕುಳಿತ ಚಾಲಕ ಮತ್ತು ನಿರ್ವಾಹಕರನ್ನು ಡಿಪೋ ಮ್ಯಾನೇಜರ್ ಇಂದು ಬಸ್ ನಿಲ್ದಾಣದಿಂದ ಹೊರಹಾಕಿದ್ದಾರೆ.
ಹೌದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಗೆ ಕುಳಿತ ಸಾರಿಗೆ ನೌಕರರನ್ನು ಹೊರ ಹಾಕಲಾಗಿದೆ. ನಂತರ ಸಾರಿಗೆ ನೌಕರರು ಬಸ್ ನಿಲ್ದಾಣದ ಹೊರಗಡೆ ಬೀದಿಯಲ್ಲೇ ಕುಳಿತು ಪ್ರತಿಭಟನೆ ಮುಂದುವರೆಸಿದ್ದಾರೆ.
Kshetra Samachara
13/12/2020 04:12 pm