ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ,ಹುಬ್ಬಳ್ಳಿ ಧಾರವಾಡದಲ್ಲಿ ಏಕಕಾಲಕ್ಕೆ ಹಠಾತ್ ದಾಳಿ, 44 ಮಕ್ಕಳ ರಕ್ಷಣೆ

ಹುಬ್ಬಳ್ಳಿ- ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ.

ಹುಬ್ಬಳ್ಳಿ ಮತ್ತು  ಧಾರವಾಡ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಏಕಕಾಲದಲ್ಲಿ ಹಠಾತ್ ದಾಳಿ ನಡೆಸಿ 44 ಅಪ್ರಾಪ್ತ ಮಕ್ಕಳನ್ನು ರಕ್ಷಣೆ ಮಾಡಿದೆ.

ದುರ್ಗದ ಬೈಲ್, ಶಾ ಬಜಾರ್, ಮೂರುಸಾವಿರ ಮಠದ ಪ್ರದೇಶ ಹಾಗೂ ಧಾರವಾಡದ ನೆಹರೂ ಮಾರ್ಕೇಟ್, ಸಿಬಿಟಿ, ಸೂಪರ ಮಾರ್ಕೇಟ್ ಸೇರಿದಂತೆ ವಿವಿಧ ಕಡೆ ನಡೆದ ದಾಳಿಯಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಸೇರಿದಂತೆ ಸ್ವಂತ ಉದ್ಯೋಗ ಹಾಗೂ ಪಾಲಕರಿಗೆ ಸಹಾಯ ಮಾಡುತ್ತಿದ್ದ ಮಕ್ಕಳನ್ನು ರಕ್ಷಿಸಿ ಪಾಲಕರಿಗೆ ಕಾನೂನಾತ್ಮಕ ತಿಳುವಳಿಕೆ ಮೂಡಿಸಿ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು. 

ಅವಳಿನಗರದಲ್ಲಿ ನಡೆದ ಹಠಾತ್ ದಾಳಿಗಳಲ್ಲಿ ಸುಮಾರು 44 ಮಕ್ಕಳನ್ನು  ಕೆಲಸದಿಂದ ಮುಕ್ತಿಗೊಳಿಸಲಾಗಿದೆ, 4 ಜನ ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಿ ಕ್ರಮ ಕೈಗೊಳಗಳಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ 20 ಹಾಗೂ ಧಾರವಾಡದಲ್ಲಿ 24 ಮಕ್ಕಳನ್ನು ಕೆಲಸದಿಂದ‌ ಮುಕ್ತಿಗೊಳಿಸಲಾಯಿತು.

ಧಾರಚಾಡ ರಾಷ್ಟ್ರೀಯ ಬಾಲ  ಯೋಜನಾ ಸಂಘ,   ಕಾರ್ಮಿಕ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

Edited By : Nirmala Aralikatti
Kshetra Samachara

Kshetra Samachara

26/11/2020 07:31 pm

Cinque Terre

44.86 K

Cinque Terre

7

ಸಂಬಂಧಿತ ಸುದ್ದಿ