ಹುಬ್ಬಳ್ಳಿ: ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯ ಅಂತ ಗೊತ್ತಿದ್ದರೂ ಅದನ್ನ ನಿರ್ಲಕ್ಷಿಸುವವರೇ ಹೆಚ್ಚು. ಅದ್ರಿಂದ ಅನಾಹುತಗಳ ಸಂಖ್ಯೆಯೂ ದಿನೇ ದಿನೇ ಜಾಸ್ತಿ ಆಗ್ತಿದೆ. ನಿಮ್ಮ ಒಂದು ಸಣ್ಣ ತಪ್ಪಿನಿಂದ ಪ್ರಾಣವೇ ಹೋಗಬಹುದಲ್ಲವೇ? ಆಗ ನಿಮ್ಮನ್ನ ನೆಚ್ಚಿಕೊಂಡ ಕುಟುಂಬದ ಗತಿ ಏನು ಅಂತ ಒಮ್ಮೆ ಯೋಚಿಸಿ.
ದಿನೇ ದಿನೇ ಬೈಕ್ ಅಪಘಾತಗಳು ಹೆಚ್ಚಾಗುತ್ತಿವೆ. ಅದೆಷ್ಟೋ ಜನ ಹೆಲ್ಮೆಟ್ ಧರಿಸದೇ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ 40 ಜನ ದ್ವಿಚಕ್ರವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ಪೊಲೀಸರು ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸಿ ಅಂತ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ದಂಡ ವಸೂಲಿ ಮಾಡಿದರೂ ಕೂಡ ಕೆಲ ಸವಾರರು ಹೆಲ್ಮೆಟ್ ಧರಿಸದೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಇಷ್ಟೆಲ್ಲಾ ಜಾಗೃತಿ ಮೂಡಿಸುತ್ತಿರುವುದು ನಿಮ್ಮ ಜೀವದ ರಕ್ಷಣೆಗಾಗಿ ಅನ್ನೋದನ್ನ ಅರಿತುಕೊಳ್ಳಿ., ಇನ್ನಾದರು ಬೈಕ್ ಸವಾರಿ ಮಾಡಬೇಕಾದರೆ ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಳ್ಳಿ ಅನ್ನೋದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಆಶಯವೂ ಆಗಿದೆ....
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
23/03/2022 01:12 pm