ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉದ್ಯೋಗ ಸಾಮ್ರಾಟ್ ಇನ್ಫೋಸಿಸ್ ಕಾರ್ಯಾರಂಭಕ್ಕೆ ಗ್ರೀನ್ ಸಿಗ್ನಲ್: ಪಬ್ಲಿಕ್ ನೆಕ್ಸ್ಟ್ ಅಭಿಯಾನಕ್ಕೆ ಜಯ!

ಹುಬ್ಬಳ್ಳಿ: ಉದ್ಯೋಗ ಸಾಮ್ರಾಟ ಎಂದೆ ಖ್ಯಾತಿ ಪಡೆದ ಇನ್ಫೋಸಿಸ್ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಜನರಿಗೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಜನರಲ್ಲಿ ಸಂತೋಷದ ಹೊಳೆ ಹರಿದಿದೆ. ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿಯ ಅಭಿಯಾನಕ್ಕೆ ಬಹುದೊಡ್ಡ ಜಯ ಸಿಕ್ಕಿದ್ದು, ಸಾರ್ವಜನಿಕರ ಧ್ವನಿಯಾಗಿರುವ ಪಬ್ಲಿಕ್ ನೆಕ್ಸ್ಟ್ ವರದಿಗೆ ಸಿಕ್ಕ ಬಹುದೊಡ್ಡ ಜಯವಾಗಿದೆ.

ಹೌದು.ಸುಮಾರು ಎರಡು ಮೂರು ವರ್ಷಗಳಿಂದಲೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿ ಹಾಗೂ ಅಭಿಯಾನದ ಸುದ್ದಿಗಳ ಮೂಲಕ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರ ಗಮನವನ್ನು ಸೆಳೆದಿತ್ತು. ಅಲ್ಲದೇ ಇದರ ಮುಂದುವರಿದ ಭಾಗವಾಗಿ ಹುಬ್ಬಳ್ಳಿ ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದರು.

ಈಗ ಇನ್ಫೊಸಿಸ್ ಕ್ಯಾಂಪಸ್ ಆರಂಭಿಸುವುದಕ್ಕೆ ಇನ್ಫೋಸಿಸ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಈ ಕುರಿತು ಸಾರ್ವಜನಿಕರು ಹಾಗೂ ಈ ಹಿಂದೆ ಸಾಕಷ್ಟು ಹೋರಾಟ ಮಾಡಿದ ಹೋರಾಟಗಾರರು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆರಂಭಕ್ಕೆ ಆಗಸ್ಟ್‌ ಒಂದನೇ ತಾರೀಖು ನಿಗದಿಯಾಗಿದ್ದು, ಹು-ಧಾ ಮಹಾನಗರ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಈಗ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಮತ್ತಷ್ಟು ಉದ್ಯಮಗಳು ಹುಬ್ಬಳ್ಳಿಗೆ ಬರುವ ಮೂಲಕ ವಾಣಿಜ್ಯನಗರಿಯಲ್ಲಿ ನಿರುದ್ಯೋಗ ತೊಲಗಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/07/2022 07:26 pm

Cinque Terre

115.71 K

Cinque Terre

13

ಸಂಬಂಧಿತ ಸುದ್ದಿ