ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ಯಶಸ್ವಿಯಾಗಿ ಪೂರ್ಣಗೊಂಡ ಉದ್ಯೋಗ ಮೇಳ: ನಿರುದ್ಯೋಗಿಗಳ ಬಾಳಿಗೆ ಬೆಳಕಾದ JOB FAIR!

ಹುಬ್ಬಳ್ಳಿ: ಯುವ ಸಮುದಾಯಕ್ಕೆ ಸಮಸ್ಯೆಗಳನ್ನು ತಂದೊಡ್ಡಿರುವ ನಿರುದ್ಯೋಗವನ್ನು ನಿವಾರಣೆ ಮಾಡಲು ಎಸಿಸಿಪಿಎಲ್ ಟ್ರೈನಿಂಗ್ ಡಿವಿಜನ್ ಬೆಂಗಳೂರು ಹಾಗೂ ಲಕ್ಷ ಫೌಂಡೇಶನ್ ಹುಬ್ಬಳ್ಳಿಯ ಸಹಯೋಗದೊಂದಿಗೆ ನಿರುದ್ಯೋಗ ಯುವಕ ಹಾಗೂ ಯುವತಿಯರಿಗಾಗಿ ಜೂನ್ 29ರಂದು ಹುಬ್ಬಳ್ಳಿಯ ವಿದ್ಯಾನಗರದ ಮರಾಠಾ ಭವನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿ ಮುಕ್ತಾಯಗೊಳ್ಳುವ ಮೂಲಕ ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆದಿದೆ.

ಹೌದು.ವಿದ್ಯಾನಗರದ ಮರಾಠಾ ಭವನದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು, ಈ ಉದ್ಯೋಗ ಮೇಳವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಅವರು ಉದ್ಘಾಟಿಸಿ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿರುವಂತಹ ಉದ್ಯೋಗಾಂಕ್ಷಿಗಳ ಕುರಿತು ಮಾತನಾಡಿ, ಒಂದಾನೊಂದು ಕಾಲದಲ್ಲಿ ಉದ್ಯೋಗವನ್ನು ಪಡೆಯಲು ಉದ್ಯೋಗಾಂಕ್ಷಿಗಳು employment exchange ನಲ್ಲಿ ಹೆಸರು ನೋಂದಣೆ ಮಾಡಿಸಿ ಉದ್ಯೋಗಕ್ಕಾಗಿ ಕಾಯಬೇಕಾಗಿತ್ತು. ಆದರೆ ಎಸಿಸಿಪಿಎಲ್ ಟ್ರೈನಿಂಗ್ ಡಿವಿಜನ್ ಬೆಂಗಳೂರು ಹಾಗೂ ಲಕ್ಷ ಫೌಂಡೇಶನ್ ಹುಬ್ಬಳ್ಳಿಯು ವಿವಿಧ ಉನ್ನತ ಮಟ್ಟದ ಕೌಶಲ್ಯ ತರಬೇತಿಯನ್ನು ಉಚಿತವಾಗಿ ನೀಡುವುದು ಮಾತ್ರವಲ್ಲದೆ, ಈ ಉದ್ಯೋಗ ಮೇಳದ ಮುಖಾಂತರ ಉದ್ಯೋಗವನ್ನು ಉದ್ಯೋಗಾಂಕ್ಷಿಗಳ ಮನೆ ಬಾಗಿಲಿಗೆ ಬರುವ ಹಾಗೆ ಮಾಡಿದ್ದಾರೆ ಎಂದು ಹೇಳಿದರು.

ಇನ್ನೂ ಈ ಉದ್ಯೋಗ ಮೇಳಕ್ಕೆ ಹುಬ್ಬಳ್ಳಿಯ ವಾರ್ಡ್ ನಂ 42ರ ಕಾರ್ಪೊರೇಟರಾದ ರೂಪಾ ಶೆಟ್ಟಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ ಅವರು ಸಹ ಕೌಶಲ್ಯತೆ ಪಡೆದುಕೊಳ್ಳವುದರ ಬಗ್ಗೆ ಮಾತನಾಡಿದರು. ಮಂಜುನಾಥ ಚವರೆಡ್ಡಿ, ರಾಘವೇಂದ್ರ ಹಳ್ಳೂರು ಅವರು ಕೂಡ ಭಾಗಿವಹಿಸಿ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಮತ್ತು ಅರೇ ಸರಕಾರಿ ಉದ್ಯೋಗದ ಬಗ್ಗೆ ಉದ್ಯೋಗಾಂಕ್ಷಿಗಳ ಕುರಿತು ಮಾತನಾಡಿದರು.

ಲಕ್ಷ ಫೌಂಡೇಶನ್ ಹುಬ್ಬಳ್ಳಿಯ ಚೇರ್ಮನ್ ರಘುನಾಥ ಖೋಡೆ, ತಿಲಕ ಶಿವಶಂಕರ, ಪ್ರಕಾಶ, ಯೋಜನಾ ಮ್ಯಾನೇಜರ್‌ಗಳು ಎಸಿಸಿಪಿಎಲ್ ಟ್ರೇನಿಂಗ್ ಡಿವಿಜನ್ ಬೆಂಗಳೂರು ಹಾಗೂ ಹಲವರು ಉಪಸ್ಥಿತರಿದ್ದರು. ಮಹೇಶ ಭಟ್ಟ ನಿರೂಪಣೆ ಮಾಡಿದರು.

ಒಟ್ಟಿನಲ್ಲಿ ಈ ಉದ್ಯೋಗ ಮೇಳಕ್ಕೆ 2150 ಉದ್ಯೋಗಾಂಕ್ಷಿಗಳ ಪಾಲ್ಗೊಂಡ್ಡಿದ್ದು, ಅದರಲ್ಲಿ ಸುಮಾರು 90% ಅಭ್ಯರ್ಥಿಗಳಿಗೆ ಉದ್ಯೋಗ ಪತ್ರವನ್ನು ನೀಡಲಾಯಿತು.

ಈ ಉದ್ಯೋಗ ಮೇಳಕ್ಕೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡದಿಂದ ಒಟ್ಟು 30 ಕಂಪನಿಗಳು ಆಗಮಿಸಿದ್ದು, Greet Technology 25 No's, Tata Motors 75 No's, IONIdea 15 No's, C G Parivar 45, Kiran Infotec 22, GladHeart 5 No's, Allsec Technology 28 No's, CMS 178 No's ಮತ್ತು ಇನ್ನೂ ಹಲವಾರು ಕಂಪನಿಗಳಲ್ಲಿ ಅನೇಕ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/07/2022 10:49 pm

Cinque Terre

239.8 K

Cinque Terre

4

ಸಂಬಂಧಿತ ಸುದ್ದಿ