ಧಾರವಾಡ: ತಾಲಿಬಾನಿಗಳು ಅಫ್ಘಾನಿಸ್ತಾನ ದೇಶವನ್ನು ವಶಕ್ಕೆ ಪಡೆದು ಒಂದು ವರ್ಷ ಕಳೆಯಿತು. ಆದರೆ ಅಲ್ಲಿರುವ ಜನ ಈಗಲೂ ಭಯದ ವಾತಾವರಣದಲ್ಲೇ ಜೀವನ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಭಾರತದಲ್ಲಿ ಇರುವ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಹೋಗಲು ಹಿಂದೆಟು ಹಾಕುತ್ತಿದ್ದಾರೆ. ಅಲ್ಲದೇ ಈಗಾಗಲೇ ಅಲ್ಲಿಗೆ ಹೋಗಿರುವ ವಿದ್ಯಾರ್ಥಿಗಳು ವಾಪಸ್ ಬರಲು ಕೂಡ ಆಗುತ್ತಿಲ್ಲ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕಳೆದ ವರ್ಷ ಆಗಸ್ಟ್ 16 ಕ್ಕೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಎಲ್ಲ ಕಡೆ ಗುಂಡು ಹಾರಿಸುತ್ತಿದ್ದರು. ಅಲ್ಲದೇ ಇಡೀ ಅಫ್ಘಾನಿಸ್ತಾನ ವಶಕ್ಕೆ ಪಡೆದುಕೊಂಡಿದ್ದರು. ಆವತ್ತಿನಿಂದ ಅಲ್ಲಿಯ ಜನ ಭಯದಲ್ಲೇ ಜೀವನ ನಡೆಸುತಿದ್ದಾರೆ. ಅಲ್ಲದೇ ಧಾರವಾಡದಲ್ಲಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ವಾಪಸ್ ಹೋಗಲು ಆಗುತ್ತಿಲ್ಲ. ಕಾರಣ, ಅಲ್ಲಿಗೆ ಹೋದರೆ ಮತ್ತೇ ವಾಪಸ್ ಮರಳುವುದು ದೊಡ್ಡ ಸಮಸ್ಯೆ. ಏಕೆಂದರೆ ಅಲ್ಲಿಯ ತಾಲಿಬಾನ್ ಸರ್ಕಾರ ಭಾರತದ ಜೊತೆ ರಾಜತಾಂತ್ರಿಕ ವ್ಯವಸ್ಥೆ ಸರಿಯಾಗಿಟ್ಟುಕೊಂಡಿಲ್ಲ. ಹೀಗಾಗಿ ಮತ್ತೇ ಭಾರತಕ್ಕೆ ಬಂದು ತಮ್ಮ ವಿದ್ಯಾಭ್ಯಾಸ ಮುಂದುವರೆಸಬೇಕಂದ್ರೆ ಅದು ಆಗಲ್ಲ. ಹೀಗಾಗಿ ಧಾರವಾಡದ ಕೃಷಿ ವಿವಿಯಲ್ಲಿ ಸಂಶೋಧನಾ ವಿದ್ಯಾಭ್ಯಾಸ ಮಾಡಲು ಬಂದಿರುವ ಅಫ್ಘಾನಿಸ್ತಾನದ ನಾಲ್ಕು ವಿದ್ಯಾರ್ಥಿಗಳು ಇಲ್ಲೇ ಇದ್ದಾರೆ. ಕಳೆದ ವರ್ಷ ಇಲ್ಲಿ 13 ವಿದ್ಯಾರ್ಥಿಗಳು ಇದ್ದರು. ಕೆಲವರು ತಮ್ಮ ವಿದ್ಯಾಭ್ಯಾಸ ಮುಗಿಸಿ ಹೋಗಿದ್ರೆ, ಇನ್ನೂ ಕೆಲವರು ವಾಪಸ್ ಬರಬಹುದು ಎಂದು ತಮ್ಮ ದೇಶಕ್ಕೆ ಹೋಗಿದ್ದರು. ಅವರು ಅಲ್ಲಿಂದ ಬರಲು ನಮ್ಮ ದೇಶದ ಹಾಗೂ ಅಫ್ಘಾನಿಸ್ತಾನದ ರಾಜತಾಂತ್ರಿಕ ವ್ಯವಸ್ಥೆ ಸರಿಯಾದರೆ ಮಾತ್ರ ಅವರು ವಾಪಸ್ ಬರಲಿದ್ದಾರೆ.
ಒಟ್ಟಿನಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ಆದರೆ ಇಲ್ಲಿರುವ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಹೋಗಬೇಕು ಎಂದು ಕಾಯುತ್ತಿದ್ದಾರೆ. ಅಲ್ಲದೇ ತಮ್ಮ ವಿದ್ಯಾಭ್ಯಾಸ ಅರ್ಧ ಮುಗಿಸಿ ಅಲ್ಲಿಗೆ ಹೋಗಿರುವ ವಿದ್ಯಾರ್ಥಿಗಳು ಮತ್ತೇ ಇಲ್ಲಿಗೆ ಬರಬೇಕು ಎಂದು ಕಾಯುತ್ತಿದ್ದಾರೆ. ಸದ್ಯ ಅಲ್ಲಿ ವಾತಾವರಣ ಸುಧಾರಿಸಿದರೆ ಮಾತ್ರ ನಮ್ಮ ದೇಶದ ಜೊತೆ ರಾಜತಾಂತ್ರಿಕ ವ್ಯವಸ್ಥೆ ಸರಿಯಾಗಲಿದೆ.
Kshetra Samachara
18/08/2022 10:35 am