ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇಟ್ಟ ಚಿಗರಿ: ಹೇಳೋದೊಂದು ಮಾಡೋದೊಂದು

ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ಯೋಜನೆ ಹುಬ್ಬಳ್ಳಿ ಧಾರವಾಡಕ್ಕೆ ಬಂದಿದ್ದೇ ಬಂದಿದ್ದು, ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆಯನ್ನು ಹುಟ್ಟು ಹಾಕುತ್ತಲೇ ಇದೆ. ಲ್ಯಾಂಡ್ ಸ್ಕೇಪ್ ಗಾರ್ಡನ್ ಮಾಡಬೇಕಿದ್ದ ಸ್ಥಳ ಈಗ ದನಗಳಿಗೆ ಆಹಾರ ತಾಣವಾಗಿದೆ.

ಹೌದು...ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ತ್ವರಿತ ಸಾರಿಗೆ ಸೇವೆಯ ಜೊತೆಗೆ ನಗರದ ಸೌಂದರ್ಯಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಕೆಲವೊಂದು ಬ್ರಿಡ್ಜ್ ಹಾಗೂ ಅಂಡರ್ ಪಾಸ್ ನಡುವಿನಲ್ಲಿ ಲ್ಯಾಂಡ್ ಸ್ಕೇಪ್ ಗಾರ್ಡನ್ ನಿರ್ಮಾಣ ಮಾಡಲು ಸ್ಥಳ ನಿಗದಿ ಮಾಡಲಾಗಿದೆ. ಆದರೆ ಇಲ್ಲಿ ಇದುವರೆಗೂ ಯಾವುದೇ ರೀತಿಯ ಗಾರ್ಡನ್ ನಿರ್ಮಾಣ ಮಾಡದೇ ಇರುವುದರಿಂದ ಬಿಡಾಡಿ ದನಗಳ ಆಹಾರ ತಾಣವಾಗಿದ್ದು, ನಿರ್ವಹಣೆ ಕೊರತೆಯಿಂದ ಚಿಗರಿ ಅವ್ಯವಸ್ಥೆಯ ಆಗರವಾಗಿದೆ.

ಇನ್ನೂ ಪಾದಚಾರಿಗಳಿಗೆ ಮಾಡಿರುವ ಫುಟ್ ಪಾತ್ ಕೂಡ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಎಲ್ಲೆಂದರಲ್ಲಿ ಕಸ ಬೆಳೆದಿದ್ದು, ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿದೆ.

Edited By : Manjunath H D
Kshetra Samachara

Kshetra Samachara

08/10/2022 06:00 pm

Cinque Terre

69.53 K

Cinque Terre

22

ಸಂಬಂಧಿತ ಸುದ್ದಿ