ಅಳ್ನಾವರ:ಸೆಪ್ಟೆಂಬರ್ 23 ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಇಂದು ಅಳ್ನಾವರ ಪಟ್ಟಣದ ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಅಳ್ನಾವರ ಪಟ್ಟಣದ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪಟ್ಟಣದ ಪೌರ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ವಿತರಿಸಿ,ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.ಅದರ ಜೊತೆಗೆ ವಿಶೇಷ ವೇತನವನ್ನು ನೀಡಿ ಹಣ್ಣುಗಳಿದ್ದ ತಟ್ಟೆಗಳನ್ನು ನೀಡಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ನೇತ್ರಾವತಿ ಕಡಕೊಳ,ಉಪಾಧ್ಯಕ್ಷ ನದೀಮ್ ಕಾಂಟ್ರಾಕ್ಟರ್,ಸಾಹಿತ್ಯ ಸಮೀತಿಯ ಚೇರ್ಮನ್ ರಾಜು ಯಲಕಪಾಟಿ,ಪ,ಪಂ ಮುಖ್ಯಾಧಿಕಾರಿ ಪ್ರಭಾಕರ್ ದೊಡಮನಿ ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ನಾಗರಾಜ ಗುರ್ಲಹೊಸೂರ್ ಮಾಡಿದರು.
Kshetra Samachara
23/09/2022 07:21 pm