ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ

ನವಲಗುಂದ : ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿರುವ ಗೊಬ್ಬರಗುಂಪಿ ಪ್ಲಾಟ್‌ದಲ್ಲಿರುವ ಮಾರುತೇಶ್ವರ ಗುಡಿ ಹತ್ತಿರ ಸಿಡಿ ನಿರ್ಮಾಣ ಮಾಡಿದ್ದು, ಅದು ಕಳಪೆ ಕಾಮಗಾರಿಯಾಗಿದ್ದರಿಂದ ನಿರ್ಮಾಣಗೊಂಡ 4-5 ತಿಂಗಳೊಳಗಾಗಿ ತಿಥಿಲಗೊಂಡಿದೆ. ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ, ಮನವಿಯನ್ನು ಸಲ್ಲಿಸಲಾಯಿತು.

ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಅಳಗವಾಡಿ ಗ್ರಾಮ ಪಂಚಾಯತ್ ಗೆ ಮನವಿ ನೀಡಿದರು. ಬಸ್ ನಿಲ್ದಾಣ ಹದಗೆಟ್ಟದ್ದು, ಬಸ್‌ಗಳು ಒಳ ಬರಲು ತೊಂದರೆಯಾಗುತ್ತಿದೆ. ಪ್ರಾಥಮಿಕ ಶಾಲೆಗಳಿಗ ಬೇರೆ ಗ್ರಾಮಗಳಿಂದ ಬರುವ ಮತ್ತು ಬೇರೆ ಗ್ರಾಮದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಗೆ ಬಸ್ಸು ಹತ್ತುವುದು ಮತ್ತು ಇಳಯುವುದಕ್ಕೆ ತೊಂದರೆಯಾಗುತ್ತಿದೆ.

ಅಲ್ಲದೆ ವಸತಿ ಬಸ್‌ಗಳು ಬಸ್ ನಿಲ್ದಾಣ ಬಿಟ್ಟು ಬೇರೆ ಕಡೆ ನಿಲ್ಲಸುವ ಪರಿಸ್ಥಿತಿ ಇದೆ. ಮತ್ತು ಅಲ್ಲಿರುವ ಹೈಮಾಸ್ಕ್ ಲೈಟ್‌ಗಳು ಹೋಗಿದ್ದು, ಈ ಕೂಡಲೇ ಅವುಗಳನ್ನು ದುರಸ್ಥಿ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಸಹ ಕಾರ್ಯದರ್ಶಿ ಗುಳಪ್ಪ ನಿಂಬಣ್ಣವರ, ಗ್ರಾಮ ಘಟಕದ ಅಧ್ಯಕ್ಷರಾದ ಪಕ್ಕೀರಗೌಡ ತಡಹಾಳ, ಸಂಘಟನೆಯ ಸದಸ್ಯರಾದ ಮುತ್ತು ಜಾದವ್, ಗಂಗಪ್ಪ ತಡಹಾಳ, ಸಿದ್ದಪ್ಪ ನರಗುಂದ, ಮಲ್ಲಪ್ಪ ಬಾರ್ಕೆರ್, ಅಶೋಕ್ ಕುರ್ತಕೋಟಿ, ಚೇತನ್ ಪತ್ತಾರ್, ಶಂಕರ್ ಗುಡಿಸಗರ, ಹೊಸದಾ ಮಡಿವಾಳರ, ಕಿರಣ್ ಹಗರ, ಬರ್ತೇಶ್ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/09/2022 04:44 pm

Cinque Terre

14.65 K

Cinque Terre

0

ಸಂಬಂಧಿತ ಸುದ್ದಿ