ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಆರ್‌ಟಿಎಸ್‌ ಪ್ರಯಾಣದಲ್ಲಿ ಸಮಸ್ಯೆಯೇ? ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ, ಸಮಸ್ಯೆ ತಿಳಿಸಿ..

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯದಲ್ಲಿ ತ್ವರಿತ ಸಾರಿಗೆ ಸೇವೆ ಕಲ್ಪಿಸುವ ಸದುದ್ದೇಶದಿಂದ ಜಾರಿಗೆ ತಂದಿರುವ ಬಿ.ಆರ್.ಟಿ.ಎಸ್ ಸೇವೆಯಲ್ಲಿ ಸಾರ್ವಜನಿಕರು ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗೆ ಸೂಕ್ತ ಕ್ರಮಗಳನ್ನು ಜರುಗಿಸುವ ಹಾಗೂ ಕುಂದುಕೊರತೆಗಳನ್ನು ನಿವಾರಿಸಲು ಬಿ.ಆರ್.ಟಿ.ಎಸ್ ನಿರ್ಧಾರ ಮಾಡಿದೆ.

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಜನರು ಚಿಗರಿ ಬಸ್ ಸೇವೆಯಲ್ಲಿ ಕೆಲವೊಂದು ನ್ಯೂನತೆಗಳನ್ನು ಅನುಭವಿಸುವ ಮೂಲಕ ಪ್ರಯಾಣ ಮಾಡಬೇಕಾಗಿತ್ತು. ಆದರೆ ಈಗ ಯಾವುದೇ ಸಮಸ್ಯೆ ಇದ್ದರೂ ಟೋಲ್ ಫ್ರೀ ನಂಬರ್ ವಾಟ್ಸ್ ಆಪ್ ಮೂಲಕ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಾಗಿದೆ. ಸ್ವಚ್ಛತೆ, ಸಿಬ್ಬಂದಿ ಅನುಚಿತ ವರ್ತನೆ, ಸಮಯದಲ್ಲಿ ವ್ಯತ್ಯಾಸ, ಸಂಚಾರ ನಿಯಮ ಉಲ್ಲಂಘನೆ ಹೀಗೆ ಎಲ್ಲ ರೀತಿಯ ಕುಂದುಕೊರತೆಗಳನ್ನು ಬಿ.ಆರ್.ಟಿ.ಎಸ್ ಕಂಟ್ರೋಲ್‌ ರೂಮ್ ಗಮನಕ್ಕೆ ತರುವ ಕಾರ್ಯವನ್ನು ಮಾಡಬಹುದಾಗಿದೆ.

ಇನ್ನೂ ಬಿ.ಆರ್.ಟಿ.ಎಸ್ ಸಾರ್ವಜನಿಕ ಪ್ರಯಾಣಿಕರಿಗೆ ಪ್ರಯಾಣದಲ್ಲಿ ಯಾವುದೇ ತೊಂದರೆ ಹಾಗೂ ಕುಂದುಕೊರತೆಗಳು ಕಂಡುಬಂದಲ್ಲಿ 9611537436 ದೂರವಾಣಿಗೆ ವಿಡಿಯೋ ಹಾಗೂ ಪೋಟೋ ಕಳಿಸುವ ಮೂಲಕ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಳ್ಳಬಹುದಾಗಿದೆ. ಅಲ್ಲದೇ 1800 5991010 ಕರೆ ಮಾಡುವ ಮೂಲಕ ಸಮಸ್ಯೆಗಳನ್ನು ಕೂಡ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.

ಒಟ್ಟಿನಲ್ಲಿ ಮಹತ್ವದ ಯೋಜನೆಯ ಮಹತ್ವವನ್ನು ಉಳಿಸಲು ಈ ನಿರ್ಧಾರ ಮಾಡಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗೆ ಕೂಡಲೇ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಕೈ ಜೋಡಿಸಿ ಎಂಬುವುದು ಬಿ.ಆರ್.ಟಿ.ಎಸ್ ಯೋಜನೆ ಉದ್ದೇಶವಾಗಿದೆ. ಅದು ಏನೇ ಇರಲಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಜನರ ಆಶೋತ್ತರಗಳಿಗೆ ಬೆಲೆ ಕೊಡಬೇಕು ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Manjunath H D
Kshetra Samachara

Kshetra Samachara

01/09/2022 04:01 pm

Cinque Terre

48.29 K

Cinque Terre

10

ಸಂಬಂಧಿತ ಸುದ್ದಿ