ಹುಬ್ಬಳ್ಳಿ: ಇಲ್ಲಿನ ನಿವಾಸಿಗಳು ಎರಡು ವರ್ಷಗಳಿಂದಲೂ ಚರಂಡಿ ಸಮಸ್ಯೆ, ಸೂಕ್ತವಾದ ರಸ್ತೆ, ಬೀದಿದೀಪಗಳು ಇಲ್ಲದೆ ಪರದಾಡುತ್ತಿದ್ದಾರೆ. ಇಷ್ಟೆಲ್ಲ ತೊಂದರೆಗಳ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ರೂ ಕ್ಯಾರೇ ಎನ್ನುತ್ತಿಲ್ಲ.
ಹೀಗೆ ತಮ್ಮ ಏರಿಯಾದಲ್ಲಿನ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದ್ದು, ನಗರದ ವಾರ್ಡ್ ನಂ. 35 ರಲ್ಲಿ ಬರುವ ಧಾನೇಶ್ವರಿ ಲೇಔಟ್ 2nd ಕ್ರಾಸ್ ನಲ್ಲಿ. ಚರಂಡಿ ನೀರು ತುಂಬಿ ರಸ್ತೆ ಮೇಲೆ ಬರುತ್ತಿದೆ. ಅಲ್ಲದೆ ಸರಿಯಾದ ರಸ್ತೆ ಇಲ್ಲ, ಗಠಾರ ವ್ಯವಸ್ಥೆಯೂ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಸೊಳ್ಳೆಗಳು ಹೆಚ್ಚಾಗಿದ್ದು, ರೋಗ ಭೀತಿ ಕಾಡುತ್ತಿದೆ. ಇತ್ತ ಬೀದಿದೀಪಗಳೂ ಇಲ್ಲ.
ಇನ್ನು, ಪಾಲಿಕೆ ವತಿಯಿಂದ ಉದ್ಯಾನವನ ನಿರ್ಮಿಸಲು ಜಾಗ ಬಿಟ್ಟಿದ್ದಾರೆ. ಆದ್ರೆ, ಅದರ ನಿರ್ವಹಣೆ ಇಲ್ಲದೆ ಗಾರ್ಡನ್ ಈಗ ಕಾಡಿನಂತಾಗಿದೆ. ಇದರಿಂದ ಹಾವು, ಚೋಳು, ಕಪ್ಪೆಗಳು ಮನೆ ಒಳಗೆ ಬರುತ್ತಿವೆ. ಇದೇ ರಸ್ತೆಯಲ್ಲಿ ಶಾಲೆ- ಕಾಲೇಜು ಇದ್ದು, ಸರಿಯಾಗಿ ರಸ್ತೆ ಇಲ್ಲದೆ ಮಕ್ಕಳು ಶಾಲೆಗೆ ಹೋಗುವುದಕ್ಕೆ ಹರಸಾಹಸ ಪಡಬೇಕಾಗಿದೆ. ಆಟೋದಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ರಸ್ತೆ ಗುಂಡಿಗಳಲ್ಲಿ ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಹ ಪರಿಸ್ಥಿತಿಯಿದೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
23/08/2022 05:44 pm