ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ
ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್. ಮಳೆ- ಬಿಸಿಲಿನಲ್ಲಿ ಬಸ್ ಗಾಗಿ ರಸ್ತೆ- ಫುಟ್ ಪಾತ್ ನಲ್ಲಿ ಕಾದು ನಿಲ್ಲುತ್ತಿದ್ದ ಪ್ರಯಾಣಿಕರಿಗೆ ಸದ್ಯ ಬಸ್‌ಸ್ಟ್ಯಾಂಡ್ ಕಟ್ಟಿ ಕೊಡಲಾಗಿದೆ.
ಸ್ಮಾರ್ಟ್ ಸಿಟಿಯಡಿಯಲ್ಲಿ ಕಾರ್ಪೊರೇಶನ್ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿತ್ತು. ಜನರ ಕಷ್ಟವನ್ನು ಗಮನಿಸಿ, ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಸ್ ನಿಲ್ದಾಣದ ಬಗ್ಗೆ ವರದಿಯನ್ನು ಬಿತ್ತರಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಪೊರೇಶನ್ ಬಸ್ ನಿಲ್ದಾಣವನ್ನು ನಿರ್ಮಿಸಿದ್ದಾರೆ. ಇದರಿಂದ ಪ್ರಯಾಣಿಕರು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಪ್ರಯಾಣಿಕರು ಬಸ್‌ಗಾಗಿ ಬಿಸಿಲು- ಮಳೆಯಲ್ಲಿ ತುಂಬಾ ಹೊತ್ತು ಕಾಯ್ತಾ ನಿಲ್ಲುತ್ತಿದ್ದರು. ಅದೆಷ್ಟೋ ವಯಸ್ಕರು ಬಿಸಿಲಿನ ತಾಪಕ್ಕೆ ಮೂರ್ಛೆ ಕೂಡ ಬಿದ್ದ ಘಟನೆಗಳು ಹಲವು ಬಾರಿ ಸಂಭವಿಸಿದ್ದವು. ಇದೀಗ ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಅಧಿಕಾರಿಗಳು, ಬಸ್ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
19/08/2022 01:58 pm